ಭಾನುವಾರ, ಅಕ್ಟೋಬರ್ 20, 2019
25 °C

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯಗತ್ಯ

Published:
Updated:

ಮೊಳಕಾಲ್ಮುರು: ಶಿಕ್ಷಣದ ಅಭಿವೃದ್ಧಿಗೆ ಸಂಬಂಧಿಸಿ ಹಮ್ಮಿಕೊಳ್ಳುವ ಸಂವಾದ ಕಾರ್ಯಾಗಾರಗಳನ್ನು ಸದುಪಯೋಗ ಮಾಡಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕೆಂದು ತಹಶೀಲ್ದಾರ್ ವೆಂಕಟಪ್ಪ ಸಲಹೆ ಮಾಡಿದರು.

ಇಲ್ಲಿನ ಗುರುಭವನದಲ್ಲಿ ಬುಧವಾರ ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಬಾಲವಿಕಾಸ ಯೋಜನೆ ಧಾರವಾಡ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪರೀಕ್ಷಾ ಪೂರ್ವ ಸಿದ್ಧತೆ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಏಕ್ರಾಗತೆ ಕಾಪಾಡಿಕೊಂಡು ಅಭ್ಯಾಸ ಮಾಡಬೇಕು. ಶಿಕ್ಷಕರು ನೀಡುವ ಮಾರ್ಗದರ್ಶನವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಉತ್ತಮ ವಿದ್ಯೆ ಪಡೆದುಕೊಳ್ಳಲು ಶ್ರಮಿಸಬೇಕು. ಸಂವಾದ ಕಾರ್ಯಕ್ರಮಗಳಲ್ಲಿ ಪೋಷಕರು ಸಹ ಮಕ್ಕಳ ಜತೆಯಲ್ಲಿ ಭಾಗವಹಿಸಿದಲ್ಲಿ ಹೆಚ್ಚು ಪರಿಣಾಮ ಬೀರಲಿದೆ ಎಂದು ಹೇಳಿದರು. ಪ್ರಾಸ್ತಾವಿಕ ಮಾತನಾಡಿದ ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಎ.ಎನ್. ತಿರುಮಲಯ್ಯ ಮಾತನಾಡಿ, `ಪರೀಕ್ಷೆಯನ್ನು ಯಾವ ರೀತಿಯಾಗಿ ಎದುರಿಸಬೇಕು ಹಾಗೂ ಯಾವ ಮುಂಜಾಗ್ರತೆ ಕೈಗೊಂಡಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ ಎಂಬ ನಿಟ್ಟಿನಲ್ಲಿ ಅರಿವು ಮೂಡಿಸಲು ಸಂವಾದ ಕಾರ್ಯಕ್ರಮವನ್ನು ಇಲಾಖೆ ಆಯೋಜಿಸಿದೆ ಎಂದರು.ಸಂಪನ್ಮೂಲ ವ್ಯಕ್ತಿಗಳಾದ ರಾಜಶೇಖರ್, ಷಫೀವುಲ್ಲಾ ಗಣಿತ ವಿಷಯ, ರವಿಕುಮಾರ್ ಮತ್ತು ಚಂದ್ರಣ್ಣ ಇಂಗ್ಲಿಷ್ ವಿಷಯ~, ವಿರೂಪಾಕ್ಷಪ್ಪ ಮತ್ತು ನಾಗೇಂದ್ರಪ್ಪ ವಿಜ್ಞಾನ ವಿಷಯ ಕುರಿತು ಮಾರ್ಗದರ್ಶನ ನೀಡಿದರು.

 ತಾಲ್ಲೂಕು ಪಂಚಾಯ್ತಿ ಇಒ ಅಂಜನ್‌ಕುಮಾರ್, ಮುಖ್ಯಶಿಕ್ಷಕರಾದ ಮಲ್ಲಿಕಾರ್ಜುನ್, ತಿಮ್ಮಾರೆಡ್ಡಿ ಉಪಸ್ಥಿತರಿದ್ದರು.

 

Post Comments (+)