ಶುಕ್ರವಾರ, ಜನವರಿ 24, 2020
16 °C

ವಿದ್ಯಾರ್ಥಿಗಳಿಗೆ ಏಡ್ಸ್ ಅರಿವು ಮೂಡಿಸಿದ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್ : ಪಟ್ಟಣದ ಮಹಾತ್ಮಗಾಂಧಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಏಡ್ಸ್ ಅರಿವು ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.ವಿದ್ಯಾರ್ಥಿಗಳು ವಾಣಿಗೆರೆ ಗ್ರಾಮದ ಸಂತ ಗ್ರಿಗೋರಿಯಸ್ ದಯಾಭವನಕ್ಕೆ ಭೇಟಿ ನೀಡಿ, ರೋಗಿಗಳು ಹಾಗೂ ಆಪ್ತ ಸಮಾಲೋಚಕರೊಂದಿಗೆ ಚರ್ಚೆ ಸಂವಾದ ನಡೆಸಿದರು.ಆಪ್ತ ಸಲಹೆಗಾರರಾದ ರಮೇಶ್ ಮಾತನಾಡಿ, ಇಂದಿನ ಯುವ ಜನರಲ್ಲಿ ಇರುವ ಲೈಂಗಿಕ ಸಂಪರ್ಕದ ಬಗೆಗಿನ ಕಾತುರತೆ ಎಚ್‌ಐವಿ ಸೋಂಕಿಗೆ ಕಾರಣವಾಗಿದೆ. ಯೋಗ, ಧ್ಯಾನ ಮೊದಲಾದ ಕ್ರಿಯಾತ್ಮಕ ಚಟುವಟಿಕೆ ತೊಡಗಿ ಎಂದು ಸಲಹೆ ನೀಡಿದರು.ಎನ್‌ಎಸ್‌ಎಸ್ ಅಧಿಕಾರಿ ಕುಮಾರಯ್ಯ, ವೆಂಕಟೇಶಪ್ಪ, ವಿನೋದ್‌ಗೌಡ ಹಾಜರಿದ್ದರು.ಫೆ.4ರಿಂದ ಮಾಗೋಡು ಜಾತ್ರಾ ಉತ್ಸವ

ಶಿರಾ : ತಾಲ್ಲೂಕಿನ ಪ್ರಸಿದ್ದ ಮಾಗೋಡು ಕಂಬದ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಫೆ.4 ರಿಂದ 11ರವರೆಗೆ ನಡೆಯಲಿದ್ದು, ಪ್ರಸಿದ್ಧ ಹೂವಿನ ರಥೋತ್ಸವ ಫೆ.6ರಂದು ನಡೆಯಲಿದೆ.ಫೆ.4ರ ಬೆಳಿಗ್ಗೆ ಗಂಗಾಸ್ನಾನ, ರಾತ್ರಿ ನೂರೊಂದೆಡೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. 5ರಂದು ಗರುಡ ವಾಹನೋತ್ಸವ, 6ರಂದು ಹೂವಿನ ರಥೋತ್ಸವ, 7ರಂದು ಆಂಜನೇಯ ವಾಹನೋತ್ಸವ, 8ರಂದು ತಲೆಮಂಡೆ, 9ರಂದು ಅನ್ನಸಂತರ್ಪಣೆ, 10ರಂದು ಜಾಡಿ ಲೆಕ್ಕಚಾರ ಹಾಗೂ 10ರಂದು ಮರುಪೂಜೆ ನಡೆಯಲಿದೆ ಎಂದು ದೇಗುಲ ಸಮಿತಿ ಪ್ರಕಟಣೆ ತಿಳಿಸಿದೆ.ಜಿಲ್ಲಾಮಟ್ಟದ ಕಬ್ಬಡಿ ಪಂದ್ಯ 26ರಿಂದ

ಶಿರಾ : ತಾಲ್ಲೂಕು ಭಗತ್ ಕ್ರಾಂತಿ ಸೇನೆ ಯಿಂದ ವಿವೇಕಾನಂದ ಹಾಗೂ ನೇತಾಜಿ ಸುಭಾಷ್ ಚಂದ್ರಬೋಸ್ ಜನ್ಮದಿನ ಪ್ರಯುಕ್ತ ಜ.26ರಿಂದ 28ರವರೆಗೆ ಮೂರು ದಿನಗಳ ಕಾಲ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಹಮ್ಮಿ ಕೊಳ್ಳಲಾಗಿದೆ.  ನಗರದ ನಾರಾಯಣ ಸ್ವಾಮಿ ಕಲ್ಯಾಣ ಮಂಟಪದ ಆವರಣದಲ್ಲಿ ಮಧ್ಯಾಹ್ನ 3 ರಿಂದ ರಾತ್ರಿ 9 ರವರೆಗೆ ಪಂದ್ಯಾವಳಿ ನಡೆಯಲಿದೆ.  ಆಸಕ್ತರು ವಿವರಗಳಿಗೆ ಬಿ.ಗಿರಿಧರ್-9844641503 ಸಂಪರ್ಕಿಸಬಹುದು ಎಂದು ಭಗತ್ ಕ್ರಾಂತಿ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)