ವಿದ್ಯಾರ್ಥಿಗಳಿಗೆ ಕಾನೂನು ತಿಳಿವಳಿಕೆ ಅಗತ್ಯ

ಬುಧವಾರ, ಜೂಲೈ 17, 2019
24 °C

ವಿದ್ಯಾರ್ಥಿಗಳಿಗೆ ಕಾನೂನು ತಿಳಿವಳಿಕೆ ಅಗತ್ಯ

Published:
Updated:

ರೋಣ: ವಿದ್ಯಾರ್ಥಿಗಳು ಅಭ್ಯಾಸ ಮಾಡುವಾಗ ಅದರ ಬಗ್ಗೆ ಶ್ರದ್ಧೆ ಆಸಕ್ತಿ ಇರಲಿ. ಜೊತೆಗೆ ಕಾನೂನು ತಿಳಿವಳಿಕೆ ಕೂಡ ಅಷ್ಟೇ ಅಗತ್ಯ ಎಂದು ಸಿವಿಲ್ ನ್ಯಾಯಾಧೀಶೆ  ಎಸ್.ಎಲ್.ಲಾಡಖಾನ ಹೇಳಿದರು.ಅವರು ಶನಿವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಪಟ್ಟಣದ ನ್ಯೂ ಲಿಟಲ್ ಫ್ಲಾವರ್ ಆಂಗ್ಲ ಮಾಧ್ಯಮಿಕ ಶಾಲೆಯ 9ನೇ ತರಗತಿಯ ಮಕ್ಕಳಿಗಾಗಿ ವಿಶೇಷ ಕಾನೂನು ಸಾಕ್ಷರತಾ ಕಾರ್ಯಕ್ರಮ ಹಾಗೂ ಆರೋಗ್ಯ ಸಂರಕ್ಷಣೆ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ನ್ಯಾಯಪರವಾದ ಮಾರ್ಗದಲ್ಲಿ ಸಾಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ, ಯಾವುದೇ ಕಷ್ಟ ತೊಂದರೆ ಬಂದರೂ ಎದೆಗುಂದದೆ ನಿಮ್ಮ ಪ್ರಯತ್ನ ಸಾಗಲಿ ಪ್ರಾಮಾಣಿಕತೆ ನ್ಯಾಯಪರತೆ ಸಾಚಾತನವಿರಲಿ ಸತ್ಯಕ್ಕೆ ದೂರವಾದ ಯಾವುದೇ ಕಾರ್ಯಕ್ಕೆ ಕೈ ಹಾಕದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಡಿ.ಮಹಾವರಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಗಳು ಸೋಲನ್ನು ಸೌಜನ್ಯದಿಂದ ಸ್ವೀಕರಿ ಸಿದಾಗ ಮಾತ್ರ ಯಶಸ್ಸು ತಾನೇ ಹಿಂಬಾಲಿಸಿಕೊಂಡು ಬರುತ್ತದೆ, ಕಾನೂನನ್ನು ನಾವು ಗೌವರಿಸಬೇಕು ಅದರ ಬಗ್ಗೆ ಆಳವಾದ ಅಧ್ಯಯನ ಅಗತ್ಯ ಎಂದು ಹೇಳಿದರು.ನ್ಯೂ ಲಿಟಲ್ ಫ್ಲಾವರ್ ಸ್ಕೂಲಿನ ಆಡಳಿತಾಧಿಕಾರಿ ಬಿ.ಎನ್. ಬಳಗಾ ನೂರ ಮಾತನಾಡಿ, ವಿದ್ಯಾಭ್ಯಾಸ ಮತ್ತು ಮಕ್ಕಳ ಹಕ್ಕುಗಳು ಒಂದೆ ನಾಣ್ಯದ ಎರಡು ಮುಖಗಳು ಅವುಗಳ ಬಗ್ಗೆ ತಿಳಿದುಕೊಳ್ಳುವದು ಅವಶ್ಯವಾ ಗಿದೆ ಎಂದು ತಿಳಿಸಿದರು.ಉಪನ್ಯಾಸಕರಾಗಿ ಆಗಮಿಸಿದ ವಕೀಲ ಜಿ.ಆರ್.ಯಳವತ್ತಿ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಉಪ ನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಕೀಲಕರ ಸಂಘದ ಅಧ್ಯಕ್ಷ ಎಂ.ಬಿ.ಕಂದಗಲ್, ಆರೋಗ್ಯ ಇಲಾಖೆಯ ರೇಶ್ಮೆ ದೇಸಾಯಿ ಮಾತನಾಡಿದರು.ಕಾರ್ಯಕ್ರಮದಲ್ಲಿ ವೀರ ರಾಣಿ ಕಿತ್ತೂರ ಚೆನ್ನಮ್ಮ ಬಾಲಕಿಯರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ತೋಟಗಂಟಿ, ಎಚ್. ಎಲ್. ಕಾಡದೇವರಮಠ ಹಾಗೂ ನ್ಯೂ ಲಿಟಲ್ ಫ್ಲಾವರ್  ಸ್ಕೂಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಶಿಕ್ಷಕ, ಶಿಕ್ಷಕಿಯರು ಪಾಲ್ಗೊಂಡಿದ್ದರು. ವಕೀಲ ವಿ.ಡಿ.ಪವಾಸ್ಕರ ಸ್ವಾಗತಿಸಿ ವಂದಿ ಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry