ವಿದ್ಯಾರ್ಥಿಗಳಿಗೆ ಸಂಭ್ರಮದ ಸ್ವಾಗತ

ಶುಕ್ರವಾರ, ಜೂಲೈ 19, 2019
24 °C

ವಿದ್ಯಾರ್ಥಿಗಳಿಗೆ ಸಂಭ್ರಮದ ಸ್ವಾಗತ

Published:
Updated:

ವಿದ್ಯಾರ್ಥಿಗಳೆಲ್ಲರಲ್ಲೂ ಹೊಸತನದ ಸಂಭ್ರಮ ತುಂಬಿಕೊಂಡಿತ್ತು. ಕಾಲೇಜು ಅವರನ್ನು ಸ್ವಾಗತಿಸಲೆಂದೇ ವಿಭಿನ್ನ ರೀತಿಯಲ್ಲಿ ಸಜ್ಜಾಗಿತ್ತು. ವಿದ್ಯಾರ್ಥಿಗಳಿಗೆ ಶುಭಕೋರಿ ಅವರನ್ನು ಸಂತಸಗೊಳಿಸಲು ಹಲವು ಕಾರ್ಯಕ್ರಮಗಳೊಂದಿಗೆ ತಯಾರಿ ನಡೆಸಿತ್ತು.ಇದು ಕಮ್ಯುನಿಟಿ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯೋನೇಜ್‌ಮೆಂಟ್ ಸ್ಟಡೀಸ್ ಸಂಸ್ಥೆ ಪದವಿ ತರಗತಿಗಳಿಗೆ ಸೇರ್ಪಡೆಯಾಗಿದ್ದ ವಿದ್ಯಾರ್ಥಿಗಳನ್ನು ಶುಭಕೋರಲು ಸಜ್ಜಾಗಿದ್ದ ರೀತಿ.ಸ್ವಾಗತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೃಷ್ಣಬೈರೇಗೌಡ, ಡಾ. ರವಿಶಂಕರ್, ಕೆ. ಚಂದ್ರಶೇಖರ್ ಆಗಮಿಸಿದ್ದರು. ಮೂವರೂ ವಿದ್ಯಾರ್ಥಿಗಳ ಯಶಸ್ಸಿಗೆ ಕಿವಿ ಮಾತುಗಳನ್ನಾಡಿದರು. ಜತೆಗೆ ಅವರ ವಿದ್ಯಾಭ್ಯಾಸದ ಹಾದಿ ಸುಗಮವಾಗಿರಲೆಂದು ಹಾರೈಸಿದರು.ಕಿರಿಯ ವಿದ್ಯಾರ್ಥಿಗಳಿಗೆ ಸಂತಸ ನೀಡಲೆಂದು ಹಿರಿಯ ವಿದ್ಯಾರ್ಥಿಗಳು ಹಲವು ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry