ವಿದ್ಯಾರ್ಥಿಗಳಿಗೆ ಸ್ವೀಡನ್‌ ಇಂಡಿಯಾ ರಸಪ್ರಶ್ನೆ ಸ್ಪರ್ಧೆ

7

ವಿದ್ಯಾರ್ಥಿಗಳಿಗೆ ಸ್ವೀಡನ್‌ ಇಂಡಿಯಾ ರಸಪ್ರಶ್ನೆ ಸ್ಪರ್ಧೆ

Published:
Updated:

ಸ್ವೀಡನ್‌ ರಾಯಭಾರ ಕಚೇರಿ ಶುಕ್ರವಾರ (ಸೆ. ೨೦) ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ‘ಸ್ವೀಡನ್ ಇಂಡಿಯಾ ನೊಬೆಲ್ ಮೆಮೊರಿಯಲ್ ಕ್ವಿಜ್ ೨೦೧೩’ ಆಯೋಜಿಸಿದೆ. ಕ್ವಿಜ್‌ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಒಂದು ಕಾಲೇಜಿನ ತಂಡದಲ್ಲಿ ಮೂವರು ಪ್ರತಿನಿಧಿಸಬಹುದು. ಇಲ್ಲಿ ವಿಜೇತರಾದವರು ನವದೆಹಲಿಯ ಜೀಸಸ್ ಅಂಡ್ ಮೇರಿ ಕಾಲೇಜಿನಲ್ಲಿ ನವೆಂಬರ್ ೧೬ರಂದು ನಡೆಯುವ ಗ್ರಾಂಡ್ ಫಿನಾಲೆಯಲ್ಲಿ ಬೆಂಗಳೂರನ್ನು ಪ್ರತಿನಿಧಿಸಲಿದ್ದಾರೆ. ಅಂತಿಮ ಸುತ್ತಿನಲ್ಲಿ ವಿಜೇತರಾದವರು ಸ್ವೀಡನ್‌ ಪ್ರವಾಸದ ಅವಕಾಶ ಪಡೆಯಲಿದ್ದಾರೆ.ನೂರು ವರ್ಷಗಳ ಹಿಂದೆ ನೊಬೆಲ್ ಪ್ರಶಸ್ತಿಗೆ ಭಾಜನರಾದ ರವೀಂದ್ರನಾಥ್ ಟ್ಯಾಗೋರ್ ಅವರು ಪ್ರಶಸ್ತಿ ಪಡೆದ ಸಂಭ್ರಮಾಚರಣೆಯೂ ಇರುತ್ತದೆ.ಈ ಸಪ್ತಾಹದಲ್ಲಿ ಸ್ವೀಡನ್‌ನ ವಿಜ್ಞಾನಿ, ಉದ್ಯಮಿ ಹಾಗೂ ದಾನಿ ಅಲ್‌ಫ್ರೆಡ್ ನೊಬೆಲ್ ಅವರ ಕೊಡುಗೆ ಯನ್ನು ಸ್ಮರಿಸಲಾಗುತ್ತದೆ.  ಮಾಹಿತಿಗೆ: www.facebook.com/swedeninindia

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry