ಮಂಗಳವಾರ, ಮೇ 18, 2021
30 °C
ಶಾಲೆ ಬಳಿ ಶಂಕಿತ ಉಗ್ರರ ಗುಂಡಿನ ದಾಳಿ

ವಿದ್ಯಾರ್ಥಿಗಳು ಸೇರಿ 11 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈದುಗುರಿ,ನೈಜೀರಿಯಾ (ಎಎಫ್‌ಪಿ): ಶಂಕಿತ `ಬೊಕೊ ಹರಂ' ಇಸ್ಲಾಮಿ ಉಗ್ರರು ಪ್ರೌಢಶಾಲೆ ಮತ್ತು ಸೇನಾ ತಪಾಸಣಾ ಕೇಂದ್ರದ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಏಳು ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಸೇರಿದಂತೆ 11 ಮಂದಿ ಮೃತಪಟ್ಟಿರುವ ಘಟನೆ ಈಶಾನ್ಯ ನೈಜೀರಿಯಾದಲ್ಲಿ ನಡೆದಿದೆ.ಯೋಬ್ ರಾಜ್ಯದ ಡಮಾಟುರು  ನಗರದಲ್ಲಿರುವ ಪ್ರೌಢಶಾಲೆಯ ವಿದ್ಯಾರ್ಥಿಗಳ ವಸತಿ ಸಮುಚ್ಚಯ ಮತ್ತು ಸೇನಾ ತಪಾಸಣಾ ಕೇಂದ್ರದ ಮೇಲೆ ಸೋಮವಾರ ರಾತ್ರಿ ಉಗ್ರರು ಪ್ರತ್ಯೇಕ ಗುಂಡಿನ ದಾಳಿ ನಡೆಸಿದರು. ಪ್ರತ್ಯುತ್ತರವಾಗಿ, ಉಗ್ರರ ಮೇಲೆ ಸೇನಾಪಡೆ ನಡೆಸಿದ ಪ್ರತಿದಾಳಿಗೆ ಇಬ್ಬರು ಉಗ್ರರು ಸಹ ಸತ್ತಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.ಉಗ್ರರು ಮತ್ತು ಸೇನಾಪಡೆ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಸೈನಿಕರು ಗಾಯಗೊಂಡ್ದ್ದಿದು, ಘಟನೆ ಸಂಬಂಧ ಮೂವರು `ಬೊಕೊ ಹರಂ' ಉಗ್ರರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಶಾನ್ಯ ನೈಜಿರಿಯಾದಲ್ಲಿ ನೆಲೆಯೂರಿರುವ `ಪಾಶ್ಚಾತ್ಯ ಶಿಕ್ಷಣವು ಪಾಪ' ಎಂಬ ಭಾವಾರ್ಥವನ್ನು ಸೂಚಿಸುವ `ಬೊಕೊ ಹರಂ', ಶಾಲೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವ ಇಸ್ಲಾಮಿ ಉಗ್ರ ಸಂಘಟನೆಯಾಗಿದೆ.ಉತ್ತರ ನೈಜೀರಿಯಾವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಿರುವ ಈ ಸಂಘಟನೆ, 2009ರಿಂದ ಇದುವರೆಗೂ ನಡೆಸಿರುವ ಹಲವು ದಾಳಿಗಳಲ್ಲಿ  ಅಮಾಯಕ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸೈನಿಕರು ಸೇರಿದಂತೆ ಸುಮಾರು 3600 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.