`ವಿದ್ಯಾರ್ಥಿಗಳ ಪ್ರಗತಿಗೆ ಸೃಜನಶೀಲತೆ ಅಗತ್ಯ'

7

`ವಿದ್ಯಾರ್ಥಿಗಳ ಪ್ರಗತಿಗೆ ಸೃಜನಶೀಲತೆ ಅಗತ್ಯ'

Published:
Updated:

ಶಿವಮೊಗ್ಗ: ವಿದ್ಯಾರ್ಥಿಗಳ ವ್ಯಕ್ತಿತ್ವದ ಸಮಗ್ರ ಅಭಿವೃದ್ಧಿಗೆ ಸೃಜನಶೀಲ ದಿನಾಚರಣೆ ಪೂರಕವಾಗಿದೆ ಎಂದು ಹೃದಯ ತಜ್ಞ ಡಾ.ಚಂದ್ರಕಾಂತ್ ಹೇಳಿದರು.ನಗರದ ಶ್ರೀರಾಮಕೃಷ್ಣ ವಿದ್ಯಾನಿಕೇತನ ವಸತಿ ವಿದ್ಯಾಲಯವು  ಶಾಲೆಯ ಹಬ್ಬ ಮತ್ತು ಶಾರದಾ ಜಯಂತಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ಸುಪ್ತಾವಸ್ಥೆಯಲ್ಲಿರುವ ಮಕ್ಕಳ ಪ್ರತಿಭೆಗೆ ಅಭಿವ್ಯಕ್ತಿ ನೀಡಲು ಇಂತಹ ದಿನಾಚರಣೆಗಳಿಂದ ಸಾಧ್ಯ. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಿದ್ಯಾರ್ಥಿಗಳಿಗೆ ವಿಜ್ಞಾನದ ಒಳಹೊರಗನ್ನು ಅರ್ಥೈಸಿಕೊಳ್ಳುವಂತೆ ಮಾಡಿ, ಅವರಿಂದಲೇ ವಿಜ್ಞಾನದ ಪ್ರಾಯೋಗಿಕ ಮಾದರಿಗಳನ್ನು ಮಾಡಿಸಿರುವುದು ಉತ್ತಮ ಪ್ರಯತ್ನ ಎಂದರು.ಗಣಿತ, ಸಮಾಜ, ಕನ್ನಡ, ಇಂಗ್ಲಿಷ್, ಹಿಂದಿ ವಿಷಯಗಳ ಜತೆ ಚಿತ್ರಕಲೆಯನ್ನು ಪ್ರಾಯೋಗಿಕವಾಗಿ ಮಾಡಿರುವುದು ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ ಎಂದ ಅವರು, ಈ ಎಲ್ಲಾ ವಿಷಯಗಳ ಆನೇಕ ಪರಿಕಲ್ಪನೆಗಳನ್ನು ಅರ್ಥೈಸಲು ಈ ವಸ್ತುಪ್ರದರ್ಶನ ಅನುಕೂಲಕರವಾಗಿದೆ ಎಂದು ಅಭಿಪ್ರಾಯಪಟ್ಟರು.ಸಂಸ್ಥೆ ಅಧ್ಯಕ್ಷ ಡಾ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ, ನೇತ್ರ ತಜ್ಞೆ ಡಾ.ಭಾರತಿ ಚಂದ್ರಶೇಖರ್, ಲೇಖಕ ಪ್ರೊ.ಸುಂದರರಾಜ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry