ಸೋಮವಾರ, ಜೂನ್ 14, 2021
22 °C

ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಯಾವುದೇ ಖಾಸಗಿ ಶಾಲೆಗಳಿಗೂ ಪೈಪೋಟಿ ನೀಡುವಷ್ಟು ವೈಭವದೂಂದಿಗೆ ಸ್ಥಳೀಯ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ಕಲಾಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ.ಈಚೆಗೆ ನಡೆದ ಸಿದ್ದಾಪುರ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೀಡಿದ ಕಂಸಾಳೆ ನೃತ್ಯ ಪ್ರದರ್ಶನ ಹಾಗೂ ಪಿರಮಿಡ್ ನಿರ್ಮಾಣ ನೆರೆದಿದ್ದ ಸಾರ್ವಜನಿಕರ ಹುಬ್ಬೇರಿಸುವಂತೆ ಮಾಡಿತ್ತು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಆರ್ಥಿಕ ಬಡತನವನ್ನು ಮರೆಮಾಚಿದ ಸಾಂಸ್ಕೃತಿಕ ಶ್ರೀಮಂತಿಕೆ ಶತಮಾನೋತ್ಸವದ ಕಾರ್ಯಕ್ರಮ ವೀಕ್ಷಿಸಲು ಕಿಕ್ಕಿರಿದು ತುಂಬಿದ ಕಲಾಭಿಮಾನಿಗಳ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು.ಈಚೆಗೆ ನಡೆದ ಕ್ಲಸ್ಟರ್‌ಮಟ್ಟದ ಜನಪದ ನೃತ್ಯ ಪ್ರದರ್ಶನದಲ್ಲಿ ಶಾಲಾ ವಿದ್ಯಾರ್ಥಿನಿಗಳಾದ ಜಯಶ್ರೀ, ಪ್ರಿಯಾ, ಲಾವಣ್ಯ, ಆರತಿ, ಸೋನಿಯ, ಚಾಂದಿನಿ ನೀಡಿದ ಕಂಸಾಳೆ ನೃತ್ಯ ಪ್ರಥಮ ಬಹುಮಾನ ಪಡೆಯಿತು.ದೇಶಭಕ್ತಿಗೀತೆ ಹಾಗೂ ನಾಡಗೀತೆಯನ್ನು ಸುಲಲಿತವಾಗಿ ಹಾಡುವುದರಲ್ಲಿ ಮತ್ತು ಸಾಂಸ್ಕೃತಿಕ ನೃತ್ಯಕ್ಕೆ ಮೆರಗು ನೀಡುವಲ್ಲಿ ಅಧ್ಯಾಪಕಿಯರಾದ ಕೋಮಲ, ನಿರ್ಮಲ ಹಾಗೂ ನೃತ್ಯ ಅಧ್ಯಾಪಕಿ ಜಲಜಾರವರ ಶ್ರಮ ಕಾರ್ಯಕ್ರಮದುದ್ದಕ್ಕೂ ಪ್ರತಿಬಿಂಬಿಸುತಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.