ಸೋಮವಾರ, ಜೂನ್ 14, 2021
26 °C
ಪಾಕ್‌ ಕ್ರಿಕೆಟ್‌ ತಂಡದ ಪರ ಜಯಘೋಷ

ವಿದ್ಯಾರ್ಥಿಗಳ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರತ್‌/ಶ್ರೀನಗರ (ಪಿಟಿಐ): ಪಾಕಿಸ್ತಾನ ಕ್ರಿಕೆಟ್‌ ತಂಡದ ಪರ ವಿಜಯೋತ್ಸವ ಆಚರಿಸಿದ 60 ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ನಂತರ ಕೈಬಿಟ್ಟಿದ್ದಾರೆ.ಮೀರತ್‌ನಲ್ಲಿಯ ಸ್ವಾಮಿ ವಿವೇಕಾ­ನಂದ ಸುಭಾರ್ತಿ ವಿ.ವಿಯಲ್ಲಿ ಅಧ್ಯಯನ ಮಾಡುತ್ತಿರುವ ಕಾಶ್ಮೀರದ  ವಿದ್ಯಾರ್ಥಿ­ಗಳ ಪೈಕಿ 60 ಜನ ಈಚೆಗೆ ನಡೆದ ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಸೋಲಿಸಿದ ಪಾಕಿಸ್ತಾನ ತಂಡದ ಪರ ಘೋಷಣೆ ಕೂಗಿದ್ದು ಕಳೆದ ಭಾನುವಾರ ವಿಜಯೋತ್ಸವ ಆಚರಿಸಿದ್ದರು.ವಿ.ವಿ. ಕುಲಪತಿ ಪಿ.ಕೆ. ಗರ್ಗ್ ನೀಡಿದ ದೂರಿನ ಅನ್ವಯ ಮೀರತ್‌ ಪೊಲೀಸರು  ಈ ವಿದ್ಯಾರ್ಥಿಗಳ ವಿರುದ್ಧ ರಾಷ್ಟ್ರ­ದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಮೇಲಾಗಿ ಈ ಬಗ್ಗೆ ಮ್ಯಾಜಿಸ್ಟ್ರೇಟ್‌ ತನಿಖೆಗೂ ಆದೇಶ ನೀಡಲಾಗಿದೆ.ಪ್ರಾಥ­ಮಿಕ ತನಿಖೆಯ ನಂತರ 60 ವಿದ್ಯಾರ್ಥಿ­ಗಳನ್ನು ಮೂರು ದಿನಗಳ­ವರೆಗೆ ತರಗತಿಗಳಿಂದ ಅಮಾನತು­ಮಾಡಲಾ­ಗಿದ್ದು, ವಸತಿಗೃಹ ಖಾಲಿ ಮಾಡಲು  ಸೂಚನೆ ನೀಡಲಾಗಿದೆ.ಜಮ್ಮು –ಕಾಶ್ಮೀರದ ರಾಜಕೀಯ ಮುಖಂಡರು ಉತ್ತರ ಪ್ರದೇಶ ಪೊಲೀಸರ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪ­ಡಿಸಿದ ನಂತರ ಎಚ್ಚೆತ್ತುಕೊಂಡ ಸರ್ಕಾರ ವಿದ್ಯಾರ್ಥಿಗಳ ವಿರುದ್ಧ ಹೂಡಿದ್ದ ದೇಶದ್ರೋಹ ಆರೋಪ ಕೈಬಿಟ್ಟಿದೆ.ಒಮರ್‌ ಆಕ್ರೋಶ

ಉತ್ತರ ಪ್ರದೇಶ ಪೊಲೀಸರ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲ, ಇಂತಹ ಕಠಿಣ ಶಿಕ್ಷೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದ್ದು, ಈ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯಲಾಗಿದೆ ಎಂದಿದ್ದಾರೆ.

ವಿದ್ಯಾರ್ಥಿಗಳ ವಿರುದ್ಧದ  ಕ್ರಮ ಕೈಬಿಡಲು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರನ್ನು ಒಮರ್‌ ಒತ್ತಾಯಿಸಿದ್ದಾರೆ.

ಕಾಶ್ಮೀರದ ವಿರೋಧ ಪಕ್ಷ ಪಿಡಿಪಿ ಸಹ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ಟೀಕಿಸಿದ್ದು, ವಿವಿ ಅಧಿಕಾರಿಗಳು ಈ ವಿಷಯದಲ್ಲಿ ಕ್ಷಮೆ ಕೋರಬೇಕು ಎಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.