ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕನ ಮೇಲೆ ಪೋಷಕರಿಂದ ಹಲ್ಲೆ

7

ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕನ ಮೇಲೆ ಪೋಷಕರಿಂದ ಹಲ್ಲೆ

Published:
Updated:
ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕನ ಮೇಲೆ ಪೋಷಕರಿಂದ ಹಲ್ಲೆ

ಬಾಗಲಕೋಟೆ: ತರಗತಿಯಲ್ಲಿ ಗಲಾಟೆ ಮಾಡಿದ ಎಂದು ವಿದ್ಯಾರ್ಥಿಯೊಬ್ಬನ ಬೆನ್ನ ಮೇಲೆ ಬಾಸುಂಡೆ ಬರುವಂತೆ ಥಳಿಸಿದ ಶಿಕ್ಷಕನ ಮೇಲೆ ಪೋಷಕರು ಹಲ್ಲೆ ನಡೆಸಿದ ಘಟನೆ ನವ ನಗರದ ಸೆಕ್ಟರ್ ನಂ 34ರ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ  (ನಂ.2) ಬುಧವಾರ ನಡೆದಿದೆ.7ನೇ ತರಗತಿ ವಿದ್ಯಾರ್ಥಿ ಆಕಾಶ ಕಾಟವೆ ತರಗತಿಯಲ್ಲಿ ಗಲಾಟೆ ಮಾಡಿದ ಕಾರಣ ಶಿಕ್ಷಕ ಸಿದ್ಧಲಿಂಗಪ್ಪ ಕರಿಲಿಂಗಣ್ಣವರ ಥಳಿಸಿದರು ಎನ್ನಲಾಗಿದೆ. ಶಿಕ್ಷಕರು ಥಳಿಸಿದ ವಿಷಯ ತಿಳಿದು ಶಾಲೆಗೆ ಬಂದ ಬಾಲಕನ ಪೋಷಕರು ಕರಿಲಿಂಗಣ್ಣ ಅವರನ್ನು ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದರು.ಸ್ಥಳಕ್ಕೆ ಆಗಮಿಸಿದ ಶಿಕ್ಷಣ ಸಂಯೋಜನಾಧಿಕಾರಿ ಬಿ.ಆರ್. ಪಾಟೀಲ ಮತ್ತು ಪೊಲೀಸ್ ಸಿಬ್ಬಂದಿ ಶಿಕ್ಷಕ ಮತ್ತು ಪೋಷಕರ ನಡುವೆ ಸಂಧಾನ ಮಾಡಿ ವಾತಾವರಣವನ್ನು ತಿಳಿಗೊಳಿಸಿದರು. ಈ ಸಂಬಂಧ ಮೊಕದ್ದಮೆ ದಾಖಲಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry