ಗುರುವಾರ , ಏಪ್ರಿಲ್ 22, 2021
28 °C

ವಿದ್ಯಾರ್ಥಿಗೆ ಸಾಂಸ್ಕೃತಿಕ ಕಾರ್ಯಕ್ರಮ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಲ್ಲಿ ಪಠ್ಯಕ್ರಮದಷ್ಟೇ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಮುಖ್ಯವಾದ ಪಾತ್ರ ವಹಿಸುತ್ತವೆ. ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಕ್ರಿಯಾಶೀಲತೆಯನ್ನು ಸೃಷ್ಟಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಇಸ್ಕಾನ್ ಉಪಹಾರ ವಿಭಾಗದ ಮುಖ್ಯಸ್ಥ ಮಹಾಜನ್ ದಾಸ್ ಪ್ರಭು ತಿಳಿಸಿದರು. ಸ್ಥಳೀಯ ದಿವ್ಯಜ್ಯೋತಿ ವಿದ್ಯಾಕೇಂದ್ರವು ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಸಹಯೋಗದಲ್ಲಿ ಏರ್ಪಡಿಸಿದ್ದ ಏಕಲವ್ಯ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದಿವ್ಯಜ್ಯೋತಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಡಾ.ಬಾಬಾ ಸಂತದಾಸ್, ದಿವ್ಯಜ್ಯೋತಿ ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲ ಎಸ್.ರಾಜಣ್ಣ ವೇದಿಕೆಯಲ್ಲಿದ್ದರು. ಸಂಸ್ಥೆಯ ಅಧ್ಯಕ್ಷ ಹಾಗೂ ವಿಶ್ರಾಂತ ಆಯುಕ್ತ ಎಲ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರಂಗ ಗೌರವ ಪ್ರಶಸ್ತಿ: ಸ್ಥಳೀಯ ಪ್ರತಿಭಾ ರಂಗ ಮಂಡ್ಯದಲ್ಲಿ ನಡೆದ ಗ್ರಾಮೀಣ ನಾಟಕೋತ್ಸವದಲ್ಲಿ ಅಭಿನಯಿಸಿದ ‘ರೊಟ್ಟಿ ಋಣ’ ನಾಟಕಕ್ಕೆ ರಂಗ ಗೌರವ ಪ್ರಶಸ್ತಿ ಮತ್ತು ನಿರ್ದೇಶಕ ಬಿ.ರಾಮಯ್ಯ ಅವರಿಗೆ ಉತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿವೆ ಎಂದು ಪ್ರತಿಭಾ ರಂಗ ಪ್ರಕಟಣೆಯಲ್ಲಿ ತಿಳಿಸಿದೆ.ಅಭಿನಯ ತರಬೇತಿ: ಸ್ಥಳೀಯ ಪ್ರತಿಭಾರಂಗ ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಲು ಆಸಕ್ತರಿಗೆ ಏಪ್ರಿಲ್ 17ರಿಂದ ಜೂನ್ ತಿಂಗಳವರೆಗೆ ಶನಿವಾರ ಮತ್ತು ಭಾನುವಾರ ರಂಗ ಅಭಿನಯ ತರಬೇತಿಯನ್ನು ಆಯೋಜಿಸಿದೆ. ಆಸಕ್ತರು ಪ್ರತಿಭಾ ರಂಗದ ಅಧ್ಯಕ್ಷರಾದ ಬಿ.ರಾಮಯ್ಯ ಅವರನ್ನು ಮೊಬೈಲ್ ಸಂಖ್ಯೆ 9844424562 ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.