ಮಂಗಳವಾರ, ಜೂನ್ 15, 2021
27 °C

ವಿದ್ಯಾರ್ಥಿಗೆ ಹೊಡೆತ ಶಿಕ್ಷಕಿಗೆ ಥಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಇಲ್ಲಿನ ಬೇಥೆಲ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ರೀಟಾ ಅವರು ಶಾಲೆಯ ನಾಲ್ಕನೇ ತರಗತಿಯ  ಆಕಾಶ್ ಎಂಬ ವಿದ್ಯಾರ್ಥಿಗೆ ಮೈಮೇಲೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಇದರಿಂದ ವಿದ್ಯಾರ್ಥಿಯ ಸೊಂಟದ ಕೆಳಭಾಗ ನೀಲಿಗಟ್ಟಿದ್ದು, ಕುಳಿತುಕೊಳ್ಳಲು ಆಗದೆ ನೋವು ಅನುಭವಿಸುವಂತಾಗಿದೆ.ಘಟನೆ ವಿವರ: ಶುಕ್ರವಾರ ಸ್ನೇಹಿತರೊಡನೆ ಬಲೂನಿನಲ್ಲಿ ಆಡುತ್ತ್ದ್ದಿದ ಆಕಾಶ್‌ನನ್ನು ಕರೆದು ಬಲೂನ್ ನೀಡುವಂತೆ ಕೇಳಿದ್ದಾರೆ.ಆತ ಕೊಡಲು ನಿರಾಕರಿಸಿದಾಗ ಮನಬಂದಂತೆ ಥಳಿಸಿದ್ದಾರೆ. ಇದರಿಂದ ಬಾಲಕನ ಮೈಮೇಲೆ ಬಾಸುಂಡೆ ಮೂಡಿ, ಚಳಿ ಜ್ವರ ಬಂದಿದೆ.ಘಟನೆಯಿಂದ ಆಕ್ರೋಶಗೊಂಡ ಆಕಾಶ್ ಪೋಷಕರು ಶನಿವಾರ ಶಾಲೆಗೆ ನುಗ್ಗಿ  ಪ್ರಾಚಾರ್ಯರಾದ ರೀಟಾರನ್ನು ತರಾಟೆಗೆ ತೆಗೆದುಕೊಂಡು ಥಳಿಸಿದ್ದಾರೆ.`ಅದು ಖಾಸಗಿ ಅನುದಾನ ರಹಿತ ಶಾಲೆಯಾದ ಕಾರಣ ಶಿಕ್ಷಕಿಯ ಮೇಲೆ ನೇರ ಕ್ರಮ ತೆಗೆದುಕೊಳ್ಳಲಾಗದು.

 

ಆದರೆ ಶಿಕ್ಷಕಿಯನ್ನು ಅಮಾನತು ಪಡಿಸುವಂತೆ ಶಾಲೆಯ ಆಡಳಿತ ಮಂಡಳಿಗೆ ಇಲಾಖೆ ಸೂಚನೆ ನೀಡಬಹುದು. ಈ ಸಂಬಂಧ ವಿಸ್ತೃತ ವರದಿಯನ್ನು ಉಪ ನಿರ್ದೇಶಕರಿಗೆ ನೀಡಿದ್ದೇನೆ~ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಪ್ರಭಾರ) ಮುನಿಕೆಂಪಯ್ಯ `ಪ್ರಜಾವಾಣಿ~ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.