ವಿದ್ಯಾರ್ಥಿನಿಗೆ ಅವಮಾನ: ಶಿಕ್ಷಕಿಯ ಬಂಧನ

ಶನಿವಾರ, ಜೂಲೈ 20, 2019
24 °C

ವಿದ್ಯಾರ್ಥಿನಿಗೆ ಅವಮಾನ: ಶಿಕ್ಷಕಿಯ ಬಂಧನ

Published:
Updated:

ಕೋಲ್ಕೊತ್ತ (ಪಿಟಿಐ): ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಸಮವಸ್ತ್ರ ಬಿಚ್ಚಿಸಿದ ಘಟನೆಗೆ ಸಂಬಂಧಿಸಿ ಪಶ್ಚಿಮ ಬಂಗಾಳದ ಗೋಪಾಲನಗರ ಗಿರಿಬಾಲ ಉಚ್ಚ ಬಾಲಿಕಾ ವಿದ್ಯಾಲಯದ  ಶಿಕ್ಷಕಿಯೊಬ್ಬರನ್ನು ಶನಿವಾರ ಬಂಧಿಸಲಾಗಿದೆ. ಈ ವಿದ್ಯಾರ್ಥಿನಿ ಐವತ್ತು ರೂಪಾಯಿ ಕದ್ದಿದ್ದಾಳೆ ಎಂದು ಇನ್ನೊಬ್ಬ ವಿದ್ಯಾರ್ಥಿನಿ ದೂರು ನೀಡಿದ ಹಿನ್ನೆಲೆಯಲ್ಲಿ ಗೋಪಾಲನಗರ ಗಿರಿಬಾಲ ಉಚ್ಚ ಬಾಲಿಕಾ ವಿದ್ಯಾಲಯದ ಶಿಕ್ಷಕಿ ಈ ಕೃತ್ಯಕ್ಕೆ ಮುಂದಾಗಿದ್ದರು. ಪಶ್ಚಿಮ ಬಂಗಾಳದಲ್ಲಿ ನಡೆದ ಇಂಥದ್ದೇ ಇನ್ನೊಂದು ಘಟನೆಯಲ್ಲಿ ದೇರೊಕೃಷ್ಣ ಬನಿತೀರ್ಥ ಬಾಲಿಕಾ ವಿದ್ಯಾಲಯದ ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿ ನೆಲದ ಮೇಲೆ ಚೆಲ್ಲಿದ ನೀರನ್ನು ಒರೆಸುವಂತೆ ಶಾಲೆಯ ಪ್ರಾಂಶುಪಾಲರು ಆದೇಶಿಸಿದ್ದರು ಎನ್ನಲಾಗಿದೆ.ಎರಡೂ ಘಟನೆಗಳ ತನಿಖೆಗೆ ಆದೇಶಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry