ಬುಧವಾರ, ಆಗಸ್ಟ್ 21, 2019
28 °C

ವಿದ್ಯಾರ್ಥಿನಿಯರಿಗೆ ಬೆಚ್ಚಗಿನ ಸ್ವಾಗತ

Published:
Updated:

ಕೆ.ಟಿ.ಎಸ್.ವಿ. ಸಂಘ ರಾಜಾಜಿನಗರ ಪಿ.ಯು. ಕಾಲೇಜಿನಲ್ಲಿ ಅಂದು ಸಮವಸ್ತ್ರದ ಬದಲಿಗೆ ಬಣ್ಣ ಬಣ್ಣಗಳ ಉಡುಪು ಧರಿಸಿದ್ದ ಹಿರಿಯ ವಿದ್ಯಾರ್ಥಿನಿಯರ ದಂಡು ಒಂದೆಡೆಯಾದರೆ, ಪ್ರೌಢಶಾಲೆ ಮುಗಿಸಿ ಆಗತಾನೆ ಪ್ರಥಮ ಪಿಯುಸಿಗೆ ಬಂದ ವಿದ್ಯಾರ್ಥಿನಿಯರು ಮತ್ತೊಂದೆಡೆ. ಅದು ವೆಲ್‌ಕಮ್ ಪಾರ್ಟಿ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ.ಕಿರಿಯರನ್ನು ಸ್ವಾಗತಿಸಲು ಹಿರಿಯ ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡಿದ್ದ ಸಿಹಿ ಕ್ಷಣಗಳವು. ಅದಕ್ಕೆಂದೇ ವೇದಿಕೆಯೂ ಸಿದ್ಧವಾಗಿತ್ತು. ಹೊಸ ಚಲನಚಿತ್ರಗೀತೆಗಳಿಗೆ ನೃತ್ಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಸಮೂಹ ಗಾಯನ, ನೃತ್ಯದ ಮೂಲಕ ವಿದ್ಯಾರ್ಥಿನಿಯರು ಸಮಾರಂಭಕ್ಕೆ ವಿಶೇಷ ರಂಗುತುಂಬಿದರು. ಪ್ರತಿಭಾ ಶೋಧ ಸ್ಪರ್ಧೆ ಇತ್ತು. ನೃತ್ಯ ರೂಪಕವನ್ನೂ ಪ್ರದರ್ಶಿಸಿದರು. 

 

Post Comments (+)