ವಿದ್ಯಾರ್ಥಿನಿಯರ ಆಪ್ತರಕ್ಷಕ ‘ಜುಸುಡೋ’

7
ಕ್ಯಾಂಪಸ್ ಸಂದರ್ಶನ

ವಿದ್ಯಾರ್ಥಿನಿಯರ ಆಪ್ತರಕ್ಷಕ ‘ಜುಸುಡೋ’

Published:
Updated:

ಗುಲ್ಬರ್ಗ: ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ದೇಶದ ಜನರ ಆಕ್ರೋಶಕ್ಕೆ ತುತ್ತಾಗಿತ್ತು. ಈ ಘಟನೆ ಮಾನಿನಿಯರ ಮಾನ ರಕ್ಷಣೆಯ ಚರ್ಚೆ ಹುಟ್ಟುಹಾಕಿತ್ತು. ಇಂತಹ ಸಂದಿಗ್ಧತೆ ಸ್ಥಿತಿಯಿಂದ ಪಾರಾಗಲು ನಗರದ ವಿದ್ಯಾರ್ಥಿನಿಯರು ಸಾಹಸ ಪ್ರವೃತ್ತಿ ರೂಢಿಸಿಕೊಳ್ಳುತ್ತಿದ್ದಾರೆ.ಒಂಟಿಯಾಗಿ ಶಾಲೆ- ಕಾಲೇಜಿಗೆ ತೆರಳುವ ವಿದ್ಯಾರ್ಥಿನಿ ಮೇಲೆ ದಾಳಿ ಸಾಧ್ಯತೆ ಹೆಚ್ಚು. ಆತ್ಮರಕ್ಷಣೆ ಕಲೆ ಗೊತ್ತಿದ್ದರೆ ದೈಹಿಕ ಹಲ್ಲೆ, ಅತ್ಯಾಚಾರ ಹಾಗೂ ಅಪರಿಚಿತರ ಕಿರುಕುಳದಿಂದ ಪಾರಾಗಬಹುದು. ಇಂತಹ ಆತ್ಮರಕ್ಷಣೆಗೆ ಜುಸುಡೋ (JUSTUDO) ಎಂಬ ಸಾಹಸ ಕ್ರೀಡೆ ಪೂರಕ ವಾಗಿದೆ.ಈ ಕಲೆಯನ್ನು ಗುಲ್ಬರ್ಗದ ಕೆಲ ಪ್ರೌಢಶಾಲೆ, ಪದವಿ ವಿದ್ಯಾರ್ಥಿ ನಿಯರು ಅಭ್ಯಾಸ ಮಾಡುತ್ತಿದ್ದಾರೆ. ಜಪಾನಿನ ಸಮರಕಲೆ ‘ಜೂಡೋ’ ಮಾದರಿಯ ಸ್ವರಕ್ಷಣೆ ಕಲೆ ಇದಾಗಿದೆ. ಜೂಡೋ, ಕರಾಟೆ, ಕುಸ್ತಿ, ಮಾರ್ಷಲ್ ಆರ್ಟ್‌ಗಳಂತೆ ಈ ಕಲೆ ಜಾಗತಿಕ ಮನ್ನಣೆ ಪಡೆದಿದೆ. ಇದನ್ನು ಕಲಿತವರು ದಾಳಿಗೆ ಯತ್ನಿಸುವವರನ್ನು ಬಲಹೀನ ಗೊಳಿಸಬಹುದು.ಸೇಂಟ್ ಜೋಸೆಫ್, ನೂತನ ವಿದ್ಯಾಲಯ, ಅಪ್ಪಾ ಪಬ್ಲಿಕ್ ಶಾಲೆ ಹಾಗೂ ಶರಣಬಸವೇಶ್ವರ ವಸತಿಶಾಲೆ, ಲಿಲ್ಲಿ ರೋಜ್ ಪ್ರೌಢಶಾಲೆ ಹಾಗೂ ಕೆಲ ಪದವಿ ಕಾಲೇಜುಗಳ ವಿದ್ಯಾರ್ಥಿನಿ ಯರು ಮೊದಲ ಬ್ಯಾಚ್‌ನಲ್ಲಿ ತರಬೇತಿ ಪಡೆದಿದ್ದಾರೆ. ಖ್ಯಾತ ಜುಡೋ ಪಟು ಶಿವಂ ಜೋಷಿ ಮಾರ್ಗದರ್ಶನ ನೀಡಿದ್ದಾರೆ. ಗುಲ್ಬರ್ಗದ ರೋಟರಿ ಮಿಡ್‌ಟೌನ್ ಹಾಗೂ ಅಂತರ ರಾಷ್ಟ್ರೀಯ ಜುಸುಡೋ ಫೆಡರೇಷ್‌ನ ಆಶ್ರಯದಲ್ಲಿ 25 ದಿನಗಳ ಕಾಲ ತರಬೇತಿ ನಡೆಯಿತು.ಕಳೆದ ತಿಂಗಳು ಮೊದಲ ಬ್ಯಾಚ್‌ನ ಸೇರಿದಂತೆ 44 ಮಂದಿಯೂ ತರಬೇತಿ ಮುಗಿಸಿದರು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಪ್ರಾತ್ಯಕ್ಷಿಕೆಯೂ ನಡೆಯಿತು. ಬಾಲಕಿಯರು ಪ್ರದರ್ಶಿಸಿದ ಈ ಸಮರಕಲೆಗೆ ಪೊಲೀಸರು ಬೆರಗಾದರು.ಈ ತರಬೇತಿ ಪಡೆದುಕೊಳ್ಳಲು ನಗರದ ಎಲ್ಲ ಶಾಲೆಗಳ ಬಾಲಕಿಯರಿಗೆ ಅವಕಾಶ ಕಲ್ಪಿಸಲಾ ಗಿತ್ತು. ಫೆಡರೇಷನ್ ಪದಾಧಿಕಾರಿಗಳು ಆಯಾ ಕಾಲೇಜುಗಳ ಮುಖ್ಯಗುರುಗಳಿಗೆ ಪತ್ರ ಬರೆದು ವಿನಂತಿಸಿದ್ದರು. ‘ಮಹಿಳೆಯರ ಮೇಲೆ ಅದರಲ್ಲೂ ಶಾಲಾ- ಕಾಲೇಜು ವಿದ್ಯಾರ್ಥಿನಿಯರ ಮೇಲೆ ಇತ್ತೀಚೆಗೆ ಅತ್ಯಾಚಾರ, ಕಿರುಕುಳ ಪ್ರಕರಣ ಹೆಚ್ಚುತ್ತಿವೆ.ವಿದ್ಯಾರ್ಥಿನಿಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸೂಕ್ತ ತರಬೇತಿ ಅಗತ್ಯ. ಮೊದಲ ಹಂತವಾಗಿ ಜುಸುಡೋ ತರಬೇತಿ ನೀಡುತ್ತಿದ್ದೇವೆ. ನಿಮ್ಮ ಶಾಲೆಯ ಮಕ್ಕಳನ್ನು ಪೋಷಕರ ಅನುಮತಿ ಪಡೆದು ಕಳುಹಿಸುವಂತೆ’ ಆ ಪತ್ರದಲ್ಲಿ

ಮನವಿ ಮಾಡಲಾಗಿತ್ತು.ರೋಟರಿ ಹಾಗೂ ಫೆಡರೇಷನ್ ಪ್ರಯತ್ನಕ್ಕೆ ಸ್ಪಂದಿಸಿ ಶಾಲಾ–-ಕಾಲೇಜುಗಳಿಂದ ಸುಮಾರು 86 ಅರ್ಜಿ ಬಂದಿದ್ದವು. ಅವುಗಳನ್ನು ಪರಿಶೀಲಿಸಿ, ಸಾಹಸ ಕ್ರೀಡೆಗಳ ಒಲವು ಹೊಂದಿದ್ದ, ಧೈರ್ಯವಂತ 44 ಯುವತಿಯರನ್ನು ಮಾತ್ರ ಆಯ್ಕೆ ಮಾಡಲಾಯಿತು. ಹೀಗೆ ಆಯ್ಕೆಯಾದ ವರಿಗೆ ಪ್ರತಿದಿನ ಬೆಳಿಗ್ಗೆ 6ರಿಂದ 7.30ರ ವರೆಗೆ ಕೋಚ್ ಶಿವಂ ಜೋಷಿ ಪಟ್ಟುಗಳನ್ನು ಹೇಳಿಕೊಟ್ಟರು. ಹಿಂಜರಿಗೆ ಮನೋಭಾವದ, ಪುಕ್ಕಲು ಸ್ವಭಾವದ ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ತುಂಬಿದರು. 20 ದಿನ ಸಾಮಾನ್ಯ ತರಬೇತಿ ನಡೆಯಿತು. ಐದು ದಿನ ಪ್ರಾತ್ಯಕ್ಷಿಕೆ ನೀಡುವ ಅಭ್ಯಾಸ ಮಾಡಲಾಯಿತು. ಕೊನೆಯ ದಿನ ನಡೆದ ಪ್ರಾತ್ಯಕ್ಷಿಕೆ ಬಳಿಕ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.‘ಜಪಾನ್, ಚೀನಾ ಸೇರಿ ಏಳು ದೇಶಗಳಲ್ಲಿ ಜ್ಯೂಡೋ ಕ್ರೀಡೆಯಷ್ಟೇ ‘ಜುಸುಡೋ’ಗೆ ಮಾನ್ಯತೆ ಪಡೆದಿದೆ. ಎದುರಾಳಿ ದೇಹದಿಂದ ಹನಿ ರಕ್ತವೂ ಹೊರಬರದಂತೆ ಘಾಸಿಗೊಳಿಸುವ ಅಪರೂಪದ ಸಾಹಸ ಕ್ರೀಡೆ ಇದಾಗಿದೆ. ಹಲ್ಲೆಗೆ ಯತ್ನಿಸುವ ವ್ಯಕ್ತಿಯ ಮೂಳೆಗೆ ಏಟು ಕೊಡಬಹುದು. ಇನ್ನೂ ಅಪಾಯ ಎದುರಾದರೆ ಹೃದಯದ ರಕ್ತಸಂಚಾರ ಸ್ಥಗಿತಗೊಳಿಸ ಬಹುದು. ವ್ಯಕ್ತಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಲಗೊಳ್ಳುತ್ತಾನೆ’ ಎನ್ನುತ್ತಾರೆ ಕೋಚ್ ಶಿವಂ ಜೋಷಿ.‘ಕಾಲೇಜು ವಿದ್ಯಾರ್ಥಿಗಳು ಇಕ್ಕಟ್ಟಿನ ಸನ್ನಿವೇಶ ಎದುರಾದಾಗ ಈ ಕಲೆ ಪ್ರಯೋಗಿಸಬಹುದು. ಎದುರಾಳಿ ಮಾತ್ರ ಗಾಯಗೊಳ್ಳುತ್ತಾನೆ. ನಾವು ಮಾತ್ರ ಶೇ 100ರಷ್ಟು ಸುರಕ್ಷಿತವಾಗಿರುತ್ತೇವೆ’ ಎನ್ನುತ್ತಾರೆ ಅವರು.ರಾಜ್ಯಮಟ್ಟದ ಸ್ಪರ್ಧೆಗೆ ಅವಕಾಶ: 44 ಮಂದಿಗೆ ಮೊದಲು ‘ಜುಸುಡೋ‘ ತರಬೇತಿ ನೀಡಲಾಗಿದೆ. ಉತ್ತಮ ಪ್ರದರ್ಶನ ನೀಡಿದ 16 ಜನರ ತಂಡವನ್ನು ಆಯ್ಕೆ ಮಾಡಿ ಸಾರ್ವಜನಿಕರ ಮುಂದೆ ಪ್ರಾತ್ಯಕ್ಷಿಕೆ ನೀಡಲಾಗಿದೆ. ಅಲ್ಲಿ ಅತ್ಯುತ್ತಮ ಎನಿಸಿದ ಕೆಲರಿಗೆ ಮತ್ತಷ್ಟು ತರಬೇತಿ ನೀಡುವ ಯೋಚನೆ ಇದೆ. ರಾಜ್ಯಮಟ್ಟದ ಸ್ಪರ್ಧೆಗೆ ಅವರನ್ನು ಅಣಿಗೊಳಿಸಲು ಜೋಷಿ ಅವರು ಸಿದ್ಧತೆ ನಡೆಸಿದ್ದಾರೆ. ಕನಿಷ್ಠ ಐವರು ವಿದ್ಯಾರ್ಥಿನಿಯರು ಇಂತಹ ಅವಕಾಶ ಪಡೆದು ಕೊಳ್ಳಲಿದ್ದಾರೆ ಎಂಬುದು ಅವರ ವಿಶ್ವಾಸ.‘ಶೀಘ್ರದಲ್ಲೇ ಇನ್ನೊಂದು ಬ್ಯಾಚ್ ಆಯ್ಕೆ ಮಾಡಲಿದ್ದೇವೆ. ಈ ಬಾರಿ ಸರ್ಕಾರಿ ಪ್ರೌಢಶಾಲೆ ಬಾಲಕಿಯರಿಗೆ ಆದ್ಯತೆ ನೀಡುತ್ತೇವೆ’ ಎನ್ನುತ್ತಾರೆ ಗುಲ್ಬರ್ಗ ರೋಟರಿ ಮಿಡ್‌ಟೌನ್ ಅಧ್ಯಕ್ಷ ಸಂಜೋತ್ ವಿ.ಷಾ.ತರಬೇತಿ ಪಡೆದವರ ಮಾತುತಾಂತ್ರಿಕ ಅಂಶಗಳ ಮನವರಿಕೆ

ಸಾಹಸ ಕ್ರೀಡೆಗಳಲ್ಲಿ ಮೊದಲಿನಿಂದಲೂ ಒಲವು ಜಾಸ್ತಿ. ಸ್ವರಕ್ಷಣೆ ಇವುಗಳಿಂದ ಸಾಧ್ಯಾವಾಗಲಿದೆ. ಈಚೆಗೆ ನಡೆದ ‘ಜುಸುಡೋ’ ತರಬೇತಿ ತಾಂತ್ರಿಕ ಅಂಶಗಳನ್ನು ಮನದಟ್ಟು ಮಾಡಿಕೊಟ್ಟಿದೆ. ಆತ್ಮವಿಶ್ವಾಸವೂ ವೃದ್ಧಿಸಿದೆ.

–ಸುಬೇದಾ, ಲಿಲ್ಲಿ ರೋಜ್ ಪ್ರೌಢಶಾಲೆಶಿಸ್ತು ರೂಢಿಸಿಕೊಂಡಿದ್ದೇನೆ

‘ಜುಸುಡೋ’ ಹೊಸ ಅನುಭವ ನೀಡುವ ಕಲೆ. ತಿಂಗಳಿಂದ ನಿಯಮಿತವಾಗಿ ಅಭ್ಯಾಸ ಮಾಡಿದ್ದೇನೆ. ಶಿಸ್ತು, ಕ್ರಮಬದ್ಧ ಜೀವನಶೈಲಿಗೆ ಇಲ್ಲಿ ಕಲಿತ ವಿದ್ಯೆ ಪೂರಕವಾಗಿದೆ. ಅಭ್ಯಾಸ ಮುಂದುವರಿಸಿ ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸೆ ಇದೆ.

–-ವೈಷ್ಣವಿ, ಸೇಂಟ್ ಜೋಸೆಫ್ ಪ್ರೌಢಶಾಲೆ

ಕಲಿಕೆಯಿಂದ ಸ್ವರಕ್ಷಣೆ

‘ಜುಸುಡೋ’ತರಬೇತಿಗೆ ಸೇರಿದಾಗ ಹಿಂಜರಿಗೆ ಕಾಡುತ್ತಿತ್ತು. ಪೋಷಕರ ಸಹಕಾರ ಹಾಗೂ ಕೋಚ್ ಮಾರ್ಗದರ್ಶನದಿಂದ ‘ಜುಸುಡೋ’ ಪಟ್ಟುಗಳನ್ನು ಸರಾಗವಾಗಿ ಪ್ರಯೋಗಿಸುವ ಶಕ್ತಿ ಬೆಳೆದಿದೆ. ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇದು ನೆರವಾಗಲಿದೆ.

–ಸುಷ್ಮಾ, ಸೇಂಟ್ ಜೋಸೆಫ್ ಪ್ರೌಢಶಾಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry