ವಿದ್ಯಾರ್ಥಿನಿ ನಿಲಯ ಪ್ರವೇಶಕ್ಕೆ ಅರ್ಜಿ

ಸೋಮವಾರ, ಜೂಲೈ 22, 2019
26 °C

ವಿದ್ಯಾರ್ಥಿನಿ ನಿಲಯ ಪ್ರವೇಶಕ್ಕೆ ಅರ್ಜಿ

Published:
Updated:

ಕೊಪ್ಪ: ತಾಲ್ಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾಂತರ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿನಿಲಯದ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಹಿಂದುಳಿದ ವರ್ಗಗಳ ವರ್ಗ-1, ವರ್ಗ-2ಎ, ವರ್ಗ-2ಎ, ವರ್ಗ-3ಬಿ, ಪ.ಜಾತಿ ಪ.ವರ್ಗಕ್ಕೆ ಸೇರಿರಬೇಕು. ಪ.ಜಾತಿ, ಪ.ವರ್ಗ ಮತ್ತು ವರ್ಗ-1ಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಅದಾಯದ ಮಿತಿ ಇರುವುದಿಲ್ಲ. ವರ್ಗ-2ಎ, ವರ್ಗ-2ಬಿ, ವರ್ಗ-3ಎ, ವರ್ಗ-3ಬಿಗೆ ಸೇರಿದ ವಿದ್ಯಾರ್ಥಿಗಳಿಗೆ ವಾರ್ಷಿಕ ವರಮಾನ ರೂ.15000ಗಳ ಮಿತಿ ಇರುತ್ತದೆ.

ಅನುತ್ತೀರ್ಣರಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅರ್ಹರಾಗಿರುವುದಿಲ್ಲ, ನಿಗದಿತ ಅರ್ಜಿ ನಮೂನೆಗಳನ್ನು ತಾಲ್ಲೂಕು ಪಂಚಾಯಿತಿ ಕಚೇರಿಯಿಂದಾಗಲಿ ಅಧವಾ ಸಂಬಂಧಪಟ್ಟ ವಿದ್ಯಾರ್ಥಿನಿ ನಿಲಯದಿಂದ ಪಡೆಯಬಹುದಾಗಿದೆ.

ಭರ್ತಿ ಮಾಡಿದ ಅರ್ಜಿಗಳೊಂದಿಗೆ ಹಿಂದಿನ ತರಗತಿಯ ಅಂಕಪಟ್ಟಿ ,ಪ್ರಸಕ್ತ ಸಾಲಿನಲ್ಲಿ ತಹಸೀಲ್ದಾರ್ ಅವರಿಂದ ಪಡೆದ ಜಾತಿ ಮತ್ತು ಅದಾಯ ಪ್ರಮಾಣ ಪತ್ರ, ಕಾಲೇಜಿಗೆ ಸೇರಿದ ಬಗ್ಗೆ ಪ್ರವೇಶ ಪಡೆದ ಕಾಲೇಜಿನ ಪ್ರಾಶುಂಪಾಲರಿಂದ ದೃಢೀಕರಣ, ಪಾಸ್‌ಪೋರ್ಟ್ ಭಾವಚಿತ್ರ 2 ಲಗತ್ತಿಸಬೇಕು. ಗ್ರಾಮ ಪಂಚಾಯಿತಿಯಿಂದ ವಾಸಸ್ಥಳಕ್ಕೂ, ಕಾಲೇಜಿಗೂ ಇರುವ ಅಂತರ ದೃಢೀಕರಣ ಲಗತ್ತಿಸುವುದು ಹಾಗೂ ಅರ್ಜಿ ಸಲ್ಲಿಸುವವರ ಮನೆಯಲ್ಲಿ ಶೌಚಾಲಯ ಹೊಂದಿರುವ ಬಗ್ಗೆ ಗ್ರಾಮ ಪಂಚಾಯಿತಿಯಿಂದ ದೃಢೀಕರಣ ಪಡೆದು ಲಗತ್ತಿಸಬೇಕು.  ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಜುಲೈ 19 ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry