ವಿದ್ಯಾರ್ಥಿನಿ ಮೇಲೆ ಮುಖ್ಯ ಶಿಕ್ಷಕ ಅತ್ಯಾಚಾರ

7

ವಿದ್ಯಾರ್ಥಿನಿ ಮೇಲೆ ಮುಖ್ಯ ಶಿಕ್ಷಕ ಅತ್ಯಾಚಾರ

Published:
Updated:

ಶಿರಾ: ತಾಲ್ಲೂಕಿನ ಗೋಣಿಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಹನುಮಂತರಾಯಪ್ಪ (48) ತಮ್ಮ ಶಾಲೆಯಲ್ಲಿ ಓದುತ್ತಿದ್ದ 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪಟ್ಟನಾಯಕಹಳ್ಳಿ ಠಾಣೆಯಲ್ಲಿ ಬಾಲಕಿಯ ತಾಯಿ  ಶುಕ್ರವಾರ ದೂರು ದಾಖಲಿಸಿದ್ದಾರೆ.ಶಾಲೆಯ ವಿದ್ಯಾರ್ಥಿಗಳನ್ನು ಡಿ. 3ರಂದು ಅಗ್ರಹಾರ ಗ್ರಾಮಕ್ಕೆ ಪ್ರತಿಭಾ ಕಾರಂಜಿಗೆಂದು ಕರೆದೊಯ್ದಿದ್ದ ಇವರು, 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದರು  ಎಂದು ದೂರಲಾಗಿದೆ.ಘಟನೆಯಿಂದ ಆಘಾತಗೊಂಡಿದ್ದ ಬಾಲಕಿ ಈ ವಿಚಾರವನ್ನು ತನ್ನ ಶಿಕ್ಷಕರಿಗೆ ತಿಳಿಸಿದ್ದಳು.ಬಾಲಕಿಯ ಪೋಷಕರು ಮತ್ತು ಗ್ರಾಮಸ್ಥರಿಗೆ ಶುಕ್ರವಾರ ವಿಷಯ ಗೊತ್ತಾಗಿ ಮುಖ್ಯ ಶಿಕ್ಷಕ ಹನುಮಂತರಾಯಪ್ಪ­ನನ್ನು ಥಳಿಸಿ, ಪೊಲೀಸರಿಗೆ ಒಪ್ಪಿಸಲಾಯಿತು. ಗ್ರಾಮಕ್ಕೆ ಭೇಟಿ ನೀಡಿದ್ದ ಬಿಇಒ ರಾಜ್‌ಕುಮಾರ್‌ ಅವರು  ಹನುಮಂತರಾಯಪ್ಪನನ್ನು ಅಮಾನತು ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry