ವಿದ್ಯಾರ್ಥಿನಿ ಸೇರಿ ಇಬ್ಬರ ಆತ್ಮಹತ್ಯೆ

7

ವಿದ್ಯಾರ್ಥಿನಿ ಸೇರಿ ಇಬ್ಬರ ಆತ್ಮಹತ್ಯೆ

Published:
Updated:

ಬೆಂಗಳೂರು: ಕುಮಾರಸ್ವಾಮಿ ಲೇಔಟ್‌ನಲ್ಲಿ ಸೋಮವಾರ ಐಶ್ವರ್ಯಾ (16) ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು. ನಂದಿನಿ ಲೇಔಟ್‌ ಸಮೀಪದ ರಾಮಣ್ಣ ಬ್ಲಾಕ್‌ ನಲ್ಲಿ ಸರೋಜಾ (20) ಎಂಬ ಯುವತಿ ನೇಣು ಹಾಕಿಕೊಂಡಿದ್ದಾರೆ.ಕುಮಾರಸ್ವಾಮಿ ಲೇಔಟ್‌ನ 50 ಅಡಿ ರಸ್ತೆಯ ನಿವಾಸಿ ಮನೋಹರ್‌ ಅವರ ಮಗಳು ಐಶ್ವರ್ಯಾ, ಜೆ.ಪಿ. ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಸಂಜೆ ಮನೆ ಯಲ್ಲಿ ಯಾರೂ ಇಲ್ಲದಿದ್ದಾಗ ಆಕೆ ನೇಣು ಹಾಕಿಕೊಂಡಿದ್ದಾಳೆ  ಎಂದು ಪೊಲೀಸರು ತಿಳಿಸಿದ್ದಾರೆ.‘ಕಿರುಪರೀಕ್ಷೆಯಲ್ಲಿ ಅನುತ್ತೀರ್ಣ ವಾಗಿದ್ದ ಕಾರಣಕ್ಕೆ ಮಗಳು ಬೇಸರ ಗೊಂಡಿದ್ದಳು. ಸಂಜೆ ಅಂಗಡಿಗೆ ಹೋಗಿ ವಾಪಸ್‌ ಬರುವಷ್ಟರಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು’ ಎಂದು ತಾಯಿ ಸರಸ್ವತಿ ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ ಲೇಔಟ್‌ ಠಾಣೆಯಲ್ಲಿ ದೂರು ದಾಖಲಾಗಿದೆ.ಮತ್ತೊಂದು ಪ್ರಕರಣ: ಮೂಲತಃ ಮಂಡ್ಯ ಜಿಲ್ಲೆಯ ಸರೋಜಾ, ತನ್ನ ಅಣ್ಣ ನಾಗರಾಜ್‌ ಜತೆ ರಾಮಣ್ಣ ಬ್ಲಾಕ್‌ನ ಬಾಡಿಗೆ ಮನೆಯಲ್ಲಿ ವಾಸ ವಾಗಿದ್ದರು. ಅವರು ಸಿದ್ಧ ಉಡುಪು ಕಾರ್ಖಾನೆ ಯಲ್ಲಿ ಕೆಲಸ ಮಾಡುತ್ತಿದ್ದರು.ನಾಗರಾಜ್‌ ಬೆಳಿಗ್ಗೆ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಸರೋಜಾ ಮನೆಯಲ್ಲೇ ನೇಣು ಹಾಕಿಕೊಂಡಿ ದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾ ಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ನಂದಿನಿಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry