ಬುಧವಾರ, ಜೂನ್ 23, 2021
23 °C

ವಿದ್ಯಾರ್ಥಿಯನ್ನು ಹಿಂಸಿಸುತ್ತಿರುವ ವಿಡಿಯೊ: ಪಾಲಕರು, ಶಿಕ್ಷಕರ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ದಕ್ಷಿಣ ದೆಹಲಿ­ಯಲ್ಲಿನ ಪ್ರಮುಖ ಶಾಲೆ­ಯೊಂದರ ಆರನೇ ತರಗತಿ ವಿದ್ಯಾರ್ಥಿ­ಯನ್ನು ಅವನ ಸಹಪಾಠಿಗಳೇ ಹಿಂಸಿಸುತ್ತಿ­ರುವ ದೃಶ್ಯಗಳ­ನ್ನೊಳ­­ಗೊಂಡ ವೀಡಿಯೊ ಒಂದು ಮೊಬೈಲ್‌ನಿಂದ ಮೊಬೈಲ್‌ಗೆ ಹರಡು­ತ್ತಿದ್ದು ಪಾಲಕರು ಮತ್ತು ಶಿಕ್ಷಕರಿಗೆ ತಲೆ­ನೋವಾಗಿ ಪರಿಣಮಿಸಿದೆ.ಒಂದಿಷ್ಟು ವಿದ್ಯಾರ್ಥಿಗಳು ಸೇರಿ­ಕೊಂಡು ತಮ್ಮ ಶಾಲೆಯ ಸಹವರ್ತಿ­ಯನ್ನು ಒದೆಯುವ, ತಳ್ಳಾಡುವ, ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವ ದೃಶ್ಯ­ಗಳನ್ನು ಒಳಗೊಂಡಿ­ರುವ ಈ ವೀಡಿಯೊ ಮೊಬೈಲ್‌ ಸಂದೇಶ ತಂತ್ರಾಂಶ ಮಂಗಳವಾರ ವಾಟ್ಸ್‌ ಆ್ಯಪ್‌ನಿಂದ  ಹರಡಿದೆ. ಇದನ್ನು ಮೊಬೈಲ್‌­ಫೋನ್‌ನಲ್ಲಿ ಚಿತ್ರೀಕರಿಸಲಾ­ಗಿದೆ ಎಂದು ಹೇಳಲಾಗಿದೆ.‘ಮೊಬೈಲ್‌ ಫೋನ್‌ಗಳನ್ನು ಕಟ್ಟು­ನಿಟ್ಟಾಗಿ ನಿರ್ಬಂಧಿಸಬೇಕು. ಆದರೆ ಖಾಸಗಿ ಮನೆಪಾಠಕ್ಕಾಗಿ ಹೋಗುವ ಮಕ್ಕಳಿಗೆ ಪಾಲಕರು ಮೊಬೈಲ್‌ ಫೋನ್‌­ಗಳನ್ನು ಕೊಡುತ್ತಾರೆ. ಅದೇನೆ ಇದ್ದರೂ ಮಕ್ಕಳು ಮೊಬೈಲ್‌ ಬಳಸುವುದನ್ನು ತಡೆಗಟ್ಟಬೇಕು’ ಎಂದು ಸಲ್ವಾನ್‌ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲರಾದ ಕಿರಣ್‌ ಮೆಹ್ತಾ ಹೇಳುತ್ತಾರೆ.‘ಈ ವಿಷಯದಲ್ಲಿ ಪಾಲಕರು ಮಕ್ಕಳ ಸ್ನೇಹಿ­ತರ ಬಗ್ಗೆಯೂ ಎಚ್ಚರಿಕೆ ವಹಿಸ­ಬೇಕು. ಅವರು ಬಳಸುವ ಭಾಷೆಯ ಬಗ್ಗೆ ಸದಾ ಗಮನಿಸುತ್ತಿ­ರಬೇಕು’ ಎಂದೂ ಮೆಹ್ತಾ ಹೇಳಿದ್ದಾರೆ. ‘ಶಾಲೆಯಲ್ಲಿ ಮಕ್ಕಳು ಹಾಗೆ ನಡೆದು­ಕೊಳ್ಳದಂತೆ ಶಿಕ್ಷಕರಾದ ನಾವು ತಡೆಯ­ಬೇಕು. ಇದಕ್ಕಾಗಿ ಪಾಲಕರು ಮತ್ತು ಶಿಕ್ಷಕರ ನಡುವೆ ಆರೋಗ್ಯಕರ ಸಂವಾದ­ವಾಗ­ಬೇ­ಕಾದ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.