ವಿದ್ಯಾರ್ಥಿವೇತನ ರದ್ದು: ಕಾರ್ಮಿಕರ ಪ್ರತಿಭಟನೆ
ಮಂಗಳೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ಬಂದ ನೆಪವನ್ನು ಮುಂದಿಟ್ಟು ಬೀಡಿ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ರದ್ದುಪಡಿಸುವ ಕ್ರಮವನ್ನು ವಿರೋಧಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಎಐಟಿಯುಸಿಗೆ ಒಳಪಟ್ಟ ದಕ್ಷಿಣ ಕನ್ನಡ ಬೀಡಿ ವರ್ಕರ್ಸ್ ಫೆಡರೇಷನ್ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಬೀಡಿ ಕಾರ್ಮಿಕರು ಮಳೆಯನ್ನೂ ಲೆಕ್ಕಿಸದೆ ಪಾಲ್ಗೊಂಡರು.
ಆರ್ಟಿಇ ಜಾರಿಗೆ ಬಂದರೂ ಬೀಡಿ ಕಾರ್ಮಿಕರ 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಈ ಮೊದಲಿನಂತೆ ವಿದ್ಯಾರ್ಥಿ ವೇತನ ನೀಡಬೇಕು.
ಒಂದು ವೇಳೆ ಹೊಸ ನೀತಿಯಂತೆ ಇದನ್ನು ರದ್ದುಪಡಿಸಿದರೆ ಖಾಸಗಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಿಗುವ ಬಿಡಿಗಾಸು ಕೈತಪ್ಪಿದಂತಾಗುತ್ತದೆ ಎಂದು ತಿಳಿಸಲಾಯಿತು. ಫೆಡರೇಷನ್ನ ಅಧ್ಯಕ್ಷ ಪಿ.ಸಂಜೀವ, ಕಾರ್ಯದರ್ಶಿ ವಿ.ಸೀತಾರಾಮ ಬೇರಿಂಜ, ಬೀಡಿ ಆ್ಯಂಡ್ ಟೊಬೆಕೊ ಲೇಬರ್ ಯೂನಿಯನ್ನ ಅಧ್ಯಕ್ಷ ಚಂದಪ್ಪ ಅಂಚನ್, ಬಂಟ್ವಾಳ ತಾಲ್ಲೂಕು ಫೆಡರೇಷನ್ನ ಬಿ.ಸುರೇಶ್, ಬಿ.ಶೇಖರ್ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.