ವಿದ್ಯಾರ್ಥಿ ಆತ್ಮಹತ್ಯೆ

7

ವಿದ್ಯಾರ್ಥಿ ಆತ್ಮಹತ್ಯೆ

Published:
Updated:

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಠಾಣೆ ವ್ಯಾಪ್ತಿಯ ಮಿತ್ತಕೊಲ್ಯ ಎಂಬಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷೆಗೆ ಹೆದರಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮಿತ್ತಕೊಲ್ಯ ನಿವಾಸಿ ವಿಶ್ವ ಹಾಗೂ ಗೀತಾ ದಂಪತಿ ಪುತ್ರ ಭವಿತ್ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ತೊಕ್ಕೊಟ್ಟು ಪೆರ್ಮನ್ನೂರು ಸೇಂಟ್ ಸೆಬಾಸ್ಟಿಯನ್ ಶಾಲೆ ವಿದ್ಯಾರ್ಥಿಯಾದ ಈತ, ಶುಕ್ರವಾರ ತ್ರೈಮಾಸಿಕ ಪರೀಕ್ಷೆಗೆ ಗೈರು ಹಾಜರಾಗಿದ್ದ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry