ಬುಧವಾರ, ಜನವರಿ 22, 2020
25 °C

ವಿದ್ಯಾರ್ಥಿ ಕೈ ಕತ್ತರಿಸಿ ತಂದೆ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: ಕ್ಷುಲ್ಲಕ ಕಾರಣಕ್ಕೆ ಒಂಬತ್ತನೇ ತರಗತಿ ವಿದ್ಯಾರ್ಥಿ ಕೈ ಕತ್ತರಿಸಿ, ಆತನ ತಂದೆಗೆ ಚೂರಿಯಿಂದ ಇರಿದಿ­ರುವ ಘಟನೆ ತಾಲ್ಲೂಕಿನ ಡಿ.ಪಾಳ್ಯ­ದಲ್ಲಿ ಬುಧವಾರ ತಡರಾತ್ರಿ ನಡೆದಿದೆ.ಇದೇ ಗ್ರಾಮದ ಹರೀಶ್‌, ಬಾಲಕೃಷ್ಣ, ಮಂಜು ಎನ್ನುವವರು ಕುಡಿದು ಮನೆ ಬಳಿ ಜಗಳವಾಡುವಾಗ ಮಚ್ಚಿನಿಂದ ವಿದ್ಯಾರ್ಥಿ ಅನಿಲ್‌ ಕುಮಾರ್‌ ಕೈ ಕತ್ತರಿಸಿ, ಆತನ ತಂದೆ ನಾರಾಯಣಪ್ಪ ಅವರ ಬೆನ್ನಿಗೆ ಚೂರಿ ಹಾಕಿ ಪರಾರಿಯಾಗಿದ್ದಾರೆ.ತೀವ್ರವಾಗಿ ಗಾಯಗೊಂಡಿದ್ದ ಅನಿಲ್‌­ಕುಮಾರ್‌ನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾರಾಯಣಪ್ಪ ಗ್ರಾಮದಲ್ಲಿ ಕುರಿ ವ್ಯಾಪಾರ ನಡೆಸುತ್ತಿದ್ದರು ಎನ್ನಲಾಗಿದೆ.ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)