ವಿದ್ಯಾರ್ಥಿ ಕ್ಯಾಮೆರಾ

7

ವಿದ್ಯಾರ್ಥಿ ಕ್ಯಾಮೆರಾ

Published:
Updated:
ವಿದ್ಯಾರ್ಥಿ ಕ್ಯಾಮೆರಾ

ವಿದ್ಯಾರ್ಥಿ ಕ್ಯಾಮೆರಾ ಹುಬ್ಬಳ್ಳಿಯ ವಿಜಯ ಮಹಾಂತೇಶ್ ಚಿತ್ರಕಲಾ ಕಾಲೇಜಿನ  ಬಿ.ವಿ.ಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ನಿರಂಜನ ಮಕಾಳಿ ಅವರಿಗೆ ಛಾಯಾಗ್ರಹಣ ಅಚ್ಚು ಮೆಚ್ಚಿನ ಹವ್ಯಾಸದಂತೆ ತೋರುತ್ತದೆ. ‘ಯುವಜನ’ಕ್ಕೆ ಕಳುಹಿಸಿರುವ ಈ ಎರಡು ಚಿತ್ರಗಳನ್ನು ಅದನ್ನು ಸಾರಿ ಹೇಳುತ್ತದೆ. ನಿರಂಜನ ಅವರ ಮೊದಲ ಚಿತ್ರ ಮಲ್ಲಿಗೆ ಮೊಗ್ಗಿನ ಮೇಲೆ ಇಬ್ಬನಿ ಆವರಿಸಿರುವ ದೃಶ್ಯ, ಇದು ಕಂಡು ಬಂದದ್ದು ಅವರ ಮನೆಯ ಆವರಣದಲ್ಲಿ. ಇನ್ನೊಂದು ಇತ್ತೀಚಿನ ದಿನಗಳಲ್ಲಿ ಬಲು ಅಪರೂಪವಾಗುತ್ತಿರುವ ಗುಬ್ಬಿಯ ಚಿತ್ರ. ಅವರ ಮನೆಯ ಕಿಟಕಿ ಮೇಲೆ ಆಕಸ್ಮಿಕವಾಗಿ ಕುಳಿತ ಗುಬ್ಬಿಯನ್ನು ಸೆರೆಹಿಡಿದಿರುವುದಾಗಿ ಮಹಾಂತೇಶ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry