ವಿದ್ಯಾರ್ಥಿ ನಿಲಯ ಅಭಿವೃದ್ಧಿಗೆ ರೂ 26 ಕೋಟಿ

ಭಾನುವಾರ, ಜೂಲೈ 21, 2019
27 °C

ವಿದ್ಯಾರ್ಥಿ ನಿಲಯ ಅಭಿವೃದ್ಧಿಗೆ ರೂ 26 ಕೋಟಿ

Published:
Updated:

ಕಂಪ್ಲಿ: ಬಳ್ಳಾರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 81 ವಿದ್ಯಾರ್ಥಿ ನಿಲಯಗಳ ಮೂಲಭೂತ ಸೌಕರ್ಯಗಳಿಗಾಗಿ ಸರ್ಕಾರ 28 ರೂಪಾಯಿ ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಸಮಾಜ ಕಲ್ಯಾಣ ಅಧಿಕಾರಿ ಎನ್. ರಾಜಪ್ಪ ತಿಳಿಸಿದರು.ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯ ಗಳ ಮೇಲ್ವಿಚಾರಕರ ಪುನಶ್ಚೇತನ ಕಾರ್ಯಾಗಾರ, ವಿದ್ಯಾರ್ಥಿ ನಿಲಯ ಗಳಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಸನ್ಮಾನ ಮತ್ತು 10ನೇ ತರಗತಿ ಪರೀಕ್ಷೆ ಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದ ಮೇಲ್ವಿಚಾರಕರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ  ಅವರು ಮಾತನಾಡಿದರು.ಜಿಲ್ಲೆಯಲ್ಲಿ 81 ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಿದ್ದು, ಇದರಲ್ಲಿ 51 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿವೆ. 21 ವಿದ್ಯಾರ್ಥಿ ನಿಲಯಗಳು ಈ ಬಾರಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂದ ಪಡೆದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ತಿಮ್ಮಲಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ  ಎಂ. ರಮೇಶ್ ಈ ಸಾಲಿನಲ್ಲಿ 625ಕ್ಕೆ 609 ಅಂಕಗಳನ್ನು ಪಡೆದಿದ್ದು,ಸಿಬ್ಬಂದಿ ಸನ್ಮಾನಿಸಿ ರೂ.11          ಸಾವಿರ ನಗದು ನೀಡಿ ಗೌರವಿಸಿದರು.ಇಲಾಖೆಯ 51 ವಿದ್ಯಾರ್ಥಿ ನಿಲಯಗಳಲ್ಲಿ 21 ನಿಲಯಗಳು   ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ನಿಲಯ ಮೇಲ್ವಿಚಾರಕ ರಾದ ಸಿದ್ದಯ್ಯ, ಗುರುಬಸವರಾಜ ಸೇರಿದಂತೆ ಇತರೆ ಮೇಲ್ವಿಚಾರಕನ್ನು ಸನ್ಮಾನಿಸಲಾಯಿತು.ನಂತರ ಹೊಸಪೇಟೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ   ಟಿ. ಶ್ರೀಧರರಾವ ಅವರಿಗೆ ಪಾರಿತೋಷಕ ವಿತರಣೆ ಮಾಡಲಾಯಿತು.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಳಾದ ಮಲ್ಲಪ್ಪ, ಜನಾರ್ದನ, ಕನಕ ತಾರ, ಮಾಣಿಕ್ಯ ಆಚಾರ್, ಶಿವಪ್ಪ ಡಂಬ್ರಳ್ಳಿ, ದ್ಯಾಮಪ್ಪ ಹಾಜರಿದ್ದರು.ಸೋಮಶೇಖರ್ ಪ್ರಾರ್ಥಿಸಿದರು. ಮಡ್ಡೇರ್ ಸಿದ್ದೇಶ್ ಸ್ವಾಗತಿಸಿದರು, ಶ್ರೀಧರರಾವ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry