ವಿದ್ಯಾರ್ಥಿ ನೈತಿಕ ಮೌಲ್ಯ ಬೆಳೆಸಿಕೊಳ್ಳಲಿ

ಮಂಗಳವಾರ, ಜೂಲೈ 23, 2019
25 °C

ವಿದ್ಯಾರ್ಥಿ ನೈತಿಕ ಮೌಲ್ಯ ಬೆಳೆಸಿಕೊಳ್ಳಲಿ

Published:
Updated:

ಬ್ರಹ್ಮಾವರ: `ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗಷ್ಟೇ ಪ್ರಯತ್ನಿಸಬಾರದು. ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಸಹ ಮೈಗೂಡಿಸಿಕೊಳ್ಳಬೇಕು~ ಎಂದು ಚೇರ್ಕಾಡಿ ಶಾರದಾ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಎನ್.ದಮಯಂತಿ ಭಟ್ ಹೇಳಿದರು.ನಗರದ ಎಸ್.ಎಂ.ಎಸ್. ಪದವಿ ಪೂರ್ವ ಕಾಲೇಜಿನ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿವಿಧ ಸಂಘಗಳು ಹಾಗೂ 2 ವಾರಗಳ ಕಾಲ ನಡೆಯುವ  ಯೋಗ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬ್ರಹ್ಮಾವರ ಓ.ಎಸ್.ಸಿ. ವಿದ್ಯಾ ಸಂಸ್ಥೆಗಳ ಸಂಚಾಲಕ ಫಾ.ರಂಬಾನ್ ಜಿ.ಎಂ.ಸ್ಕರಿಯಾ ಅಧ್ಯಕ್ಷತೆ ವಹಿಸಿದ್ದರು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿ ಶುಕದೇವಾನಂದ ಹೆಗ್ಡೆ ಅವರನ್ನು ಗೌರವಿಸಲಾಯಿತು. ಕಾಲೇಜಿನ ಉಪಪ್ರಾಂಶುಪಾಲ ಬಿ.ಶ್ರೀನಿವಾಸ ಭಟ್, ಶಿಕ್ಷಕರಾದ ಸ್ಟ್ಯಾನಿ ರೋಡ್ರಿಗಸ್, ಆರ್.ಟಿ. ಭಟ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry