ಶುಕ್ರವಾರ, ಮೇ 7, 2021
27 °C

ವಿದ್ಯಾರ್ಥಿ ಬಸ್ ಪಾಸ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿ ಬಸ್ ಪಾಸ್ ವಿತರಣೆ

ಬೆಂಗಳೂರು:  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 2013-14ನೇ ಸಾಲಿನ ವಿದ್ಯಾರ್ಥಿ ಪಾಸ್ ವಿತರಣಾ ಪ್ರಕ್ರಿಯೆಯನ್ನು ಆರಂಭಿಸಿದೆ.ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗುರುವಾರದಿಂದಲೇ ಪಾಸ್ ವಿತರಿಸಲಾಗುತ್ತಿದೆ. ಈ ವಿದ್ಯಾರ್ಥಿಗಳಿಗೆ ರಜಾದಿನವಾದ ಇದೇ 8 ಹಾಗೂ 9ರಂದು ಸಹ ಪಾಸ್ ವಿತರಿಸಲಾಗುವುದು.ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜೂನ್ 12ರಿಂದ, ಪದವಿ, ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯ ಮತ್ತು ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ಜುಲೈ 5ರಿಂದ ಪಾಸ್ ವಿತರಿಸಲಾಗುವುದು.

ರಜಾದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ಪಾಸ್‌ಗಳನ್ನು ನೀಡಲಾಗುವುದು. ನಗರದಲ್ಲಿ 36 ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ.ವಿತರಣಾ ಕೇಂದ್ರಗಳು: ಮೆಜೆಸ್ಟಿಕ್ ಬಸ್ ನಿಲ್ದಾಣ, ಶಿವಾಜಿನಗರ ಬಸ್ ನಿಲ್ದಾಣ, ಶಾಂತಿನಗರ ನಿಲ್ದಾಣ, ಇಂದಿರಾನಗರ, ದೊಮ್ಮಲೂರು, ಜೀವನ್‌ಭಿಮಾನಗರ, ಕೆ.ಆರ್.ಪುರ, ಕಲ್ಯಾಣನಗರ, ಕಾವಲ್ ಬೈರಸಂದ್ರ, ಬಸವೇಶ್ವರನಗರ, ವಿಜಯನಗರ, ಚಂದ್ರಾಲೇಔಟ್, ಕುಮಾರಸ್ವಾಮಿ ಲೇಔಟ್, ಕೆಂಗೇರಿ ಟಿಟಿಎಂಸಿ, ನೀಲಸಂದ್ರ, ಹಂಪಿನಗರ, ನಂದಿನಿ ಲೇಔಟ್, ನೆಲಮಂಗಲ, ಚೌಡೇಶ್ವರಿ ನಿಲ್ದಾಣ, ವಿದ್ಯಾರಣ್ಯಪುರ, ಯಲಹಂಕ 5ನೇ ಹಂತ, ರಾಜಾಜಿನಗ 1ನೇ ಬ್ಲಾಕ್, ಮಲ್ಲೇಶ್ವರ ಬಸ್ ನಿಲ್ದಾಣ, ಜಯನಗರ ಟಿಟಿಎಂಸಿ, ಚನ್ನಮನಕೆರೆ ಅಚ್ಚುಕಟ್ಟು, ಬಿಟಿಎಂ ಬಡಾವಣೆ, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ ಟಿಟಿಎಂಸಿ, ಕೆ.ಆರ್.ಮಾರುಕಟ್ಟೆ, ಯಶವಂತಪುರ ಟಿಟಿಎಂಸಿ, ಕಾಡುಗೋಡಿ, ಬನಶಂಕರಿ ಟಿಟಿಎಂಸಿ, ಬನ್ನೇರುಘಟ್ಟ ಟಿಟಿಎಂಸಿ, ಉತ್ತರಹಳ್ಳಿ ಮತ್ತು ಚಂದಾಪುರ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.