ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಭಾನುವಾರ, ಜೂಲೈ 21, 2019
21 °C

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Published:
Updated:

ಬೆಂಗಳೂರು:  ಬ್ಯಾರಿ ಮಾತೃಭಾಷೆಯಾಗಿರುವ ಮುಸ್ಲಿಂ ಸಮುದಾಯಕ್ಕೆ ಸೇರಿದ ಬಡ ವಿದ್ಯಾರ್ಥಿಗಳಿಗೆ ಪ್ರತಿವರ್ಷದಂತೆ ಈ ವರ್ಷವು ವಿದ್ಯಾರ್ಥಿ ವೇತನ ನೀಡಲು ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ ಅರ್ಜಿಗಳನ್ನು ಆಹ್ವಾನಿಸಿದೆ.ಪ್ರಸಕ್ತ ಸಾಲಿನಲ್ಲಿ ಪಿಯುಸಿ, ಡಿಗ್ರಿ, ಡಿಪ್ಲೊಮಾ, ಸ್ನಾತಕೋತ್ತರ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ಅರ್ಹ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಅರ್ಜಿ ಸಲ್ಲಿಬಹುದು.

ಕಳೆದ ವರ್ಷ ಸಂಸ್ಥೆಯಿಂದ ವೇತನ ಪಡೆದವರು ಈ ಬಾರಿಯೂ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಜುಲೈ 24ರ ಒಳಗೆ ಕೆಳಕಡ ವಿಳಾಸಕ್ಕೆ ಕಳುಹಿಸಲು ಪ್ರಕಟಣೆ ಕೋರಿದೆ. ಅರ್ಜಿ ಹಾಗೂ ಅರ್ಹತಾ ನಿಬಂಧನೆಗಳಿಗೆ ವೆಬ್‌ಸೈಟ್ ನೋಡಬಹುದು.ವಿಳಾಸ- ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್, ನಂ. 25/11, ಫಿಝಾ ಡೆವಲಪರ್ಸ್, ರೆಸಿಡೆನ್ಸಿ ರಸ್ತೆ. ವಿವರಗಳಿಗೆ ಟಿ.ಕೆ.ಶರೀಫ್ (98452 51941), ಚಾಯಬ್ಬ ( 98844 53651).

ವೆಬ್‌ಸೈಟ್-www.thebearyswelfareassociation.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry