ವಿದ್ಯಾರ್ಥಿ ಸಮಾಲೋಚನಾ ಕೋಶ: ಸಲಹೆ

7

ವಿದ್ಯಾರ್ಥಿ ಸಮಾಲೋಚನಾ ಕೋಶ: ಸಲಹೆ

Published:
Updated:

ವಿಜಾಪುರ: `ವಿದ್ಯಾರ್ಥಿಗಳಲ್ಲಿ ದೈಹಿಕ ಅಸಮರ್ಥತೆಗಿಂತ ಮಾನಸಿಕ ಅಸಮರ್ಥತೆ ಬಹಳ ಕೆಟ್ಟದ್ದು. ಅವರಲ್ಲಿ ಭಾವನಾತ್ಮಕ  ಸಮತೋಲನ ಹಾಗೂ ಆತ್ಮವಿಶ್ವಾಸ ಮೂಡಿಸಲು ಪ್ರತಿ ಮಹಿಳಾ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಮಾಲೋಚನಾ ಕೋಶ ಪ್ರಾರಂಭಿಸಬೇಕು' ಹಿರಿಯ ಮನೋರೋಗ ತಜ್ಞ, ಮಹಿಳಾ ವಿವಿ ಸಿಂಡಿಕೇಟ್ ಸದಸ್ಯ ಡಾ.ಆನಂದ ಪಾಂಡುರಂಗಿ ಹೇಳಿದರು.ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೂತನ ಸಿಂಡಿಕೇಟ್ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಸಿಂಡಿಕೇಟ್ ಸದಸ್ಯೆ ಸೀಮಾ ವೈಕುಂಟೆ ಮಾತನಾಡಿ,  `ವಿಶ್ವವಿದ್ಯಾಲಯಕ್ಕೆ ಈಗ ಒಳ್ಳೆಯ ಕುಲಪತಿ ಸಿಕ್ಕಿದ್ದಾರೆ. ಅವರ ನೇತೃತ್ವದಲ್ಲಿ ಮಾದರಿ ಕೆಲಸ ಮಾಡೋಣ. ಮಹಿಳಾ ವಿವಿ ವ್ಯಾಪ್ತಿಯನ್ನು ದಕ್ಷಿಣ ಕರ್ನಾಟಕಕ್ಕೂ ವಿಸ್ತರಿಸಬೇಕಾದ ಅಗತ್ಯವಿದೆ' ಎಂದರು.ಸಿಂಡಿಕೇಟ್ ಸದಸ್ಯೆ ಸಂಗೀತಾ ಕಟ್ಟಿಮನಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಮೀನಾ ಆರ್. ಚಂದಾವರಕರ್, ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ನೂತನ ಸಿಂಡಿಕೇಟ್ ಸದಸ್ಯರ ಪಾತ್ರ ಬಹಳ ದೊಡ್ಡದು. ಎಲ್ಲರೂ ಕೂಡಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು. ಸಿಂಡಿಕೇಟ್ ಸದಸ್ಯರಾದ ಬಸವರಾಜ ಜಾಬಿನ್, ಡಾ.ಶಂಕರ, ಭಾರತಿ ಸಂಗಣ್ಣವರ, ನಸೀಮಾ ಕುರೇಶಿ , ಜಮೀಲಾ ಉಪಸ್ಥಿತರಿದ್ದರು.ಕುಲಸಚಿವ ಪ್ರೊ.ಜಿ.ಆರ್. ನಾಯಕ, ಮೌಲ್ಯಮಾಪನ ಕುಲಸಚಿವೆ ಡಾ.ಡಿ.ಎಚ್. ತೇಜಾವತಿ, ಆರ್ಥಿಕ ಅಧಿಕಾರಿ ಡಾ.ಆರ್. ಸುನಂದಮ್ಮ ಉಪಸ್ಥಿತರಿದ್ದರು. ಡಾ.ಶರಣಪ್ಪ ಹಲಸೆ, ಡಾ.ಎಸ್.ಬಿ. ಕಾಮಶೆಟ್ಟಿ, ಡಾ.ಎಸ್.ಬಿ. ಮಾಡಗಿ, ಬೋಧಕೇತರ ಸಂಘದ ಅಧ್ಯಕ್ಷ ಎಸ್.ಆರ್. ಘಾಟಗೆ, ಸುಭಾಷ್ ಕಾಂಬಳೆ ಇತರರು ಇದ್ದರು. ಡಾ. ವಿಜಯಾ ಕೋರಿಶೆಟ್ಟಿ ಸ್ವಾಗತಿಸಿದರು. ಡಾ.ವಿ.ವಿ. ಮಳಗಿ,  ಡಾ. ಮಾಲಿಪಾಟೀಲ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry