ಬುಧವಾರ, ಅಕ್ಟೋಬರ್ 23, 2019
24 °C

ವಿದ್ಯಾ ಮನ್ವಂತರ

Published:
Updated:

`ದಿ ಡರ್ಟಿ ಪಿಕ್ಚರ್~ ಎಷ್ಟು ಹಣ ಬಾಚಿಹಾಕಿತು ಎಂಬುದಕ್ಕಿಂತ ಹೆಚ್ಚಾಗಿ ವಿದ್ಯಾ ಬಾಲನ್ ಬದಲಾದ ಇಮೇಜಿನಿಂದ ಸದ್ದು ಮಾಡಿದ್ದು. `ಪ್ಯಾರ ಕೆ ಸೈಡ್ ಎಫೆಕ್ಟ್ಸ್~ ಚಿತ್ರದ ಮುಂದುವರಿದ ಭಾಗ ನಿರ್ಮಿಸಲು ಪ್ರಿತಿಶ್ ನಂದಿ ಪ್ರೊಡಕ್ಷನ್ ಅದಾಗಲೇ ಸಜ್ಜಾಗಿದ್ದು, ಮಲ್ಲಿಕಾ ಶೆರಾವತ್ ಜಾಗಕ್ಕೆ ವಿದ್ಯಾ ಅವರನ್ನು ತಂದು ಕೂರಿಸಲು ಆ ಸಂಸ್ಥೆ ನಿರ್ಧರಿಸಿದೆ.

ಕೇವಲ ಗಂಭೀರ ಹಾಗೂ ಅಭಿನಯ ಪ್ರಧಾನ ಪಾತ್ರಗಳಷ್ಟೇ ಇದುವರೆಗೆ ವಿದ್ಯಾ ಅವರನ್ನು ಹುಡುಕಿಕೊಂಡು ಬರುತ್ತಿದ್ದವು. ಈಗ ಅವರ ಇಮೇಜ್ ಸಂಪೂರ್ಣ ಬದಲಾಗಿದ್ದು, ಮಲ್ಲಿಕಾ ಶೆರಾವತ್ ತಹರದ ಬಿಚ್ಚಮ್ಮಗಳೂ ಬೆಚ್ಚಿಬೀಳುವಂತಾಗಿದೆಯಂತೆ. ಸದ್ಯಕ್ಕೆ `ಯುಟಿವಿ~ಯ ಅಧಿಕಾರಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆಂಬ ಗಾಸಿಪ್‌ನ ಭಾಗವಾಗಿರುವ ವಿದ್ಯಾ ಮುಂದೊಂದು ದಿನ ಮದುವೆ ಕೂಡ ಆಗಲಿದ್ದಾರೆ. ಯಾರನ್ನು ಆಗುತ್ತಾರೆಂಬುದು ಮಾತ್ರ ಇನ್ನೂ ಗುಟ್ಟು. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)