ವಿದ್ಯುತ್‌ಗಾಗಿ ಪ್ರತಿಭಟನೆ

7

ವಿದ್ಯುತ್‌ಗಾಗಿ ಪ್ರತಿಭಟನೆ

Published:
Updated:

ಇಳಕಲ್: ಗ್ರಾಹಕರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕೆಂದು ಆಗ್ರಹಿಸಿ ನಗರದ ವಿದ್ಯುತ್ ಬಳಕೆದಾರರ ವೇದಿಕೆ ಹಾಗೂ ವಿದ್ಯುತ್ ಗುತ್ತಿಗೆದಾರರ ಸಂಘ ಪ್ರತಿಭಟನಾ ಮೆರವಣಿಗೆ ನಡೆಸಿ, ಹೆಸ್ಕಾಂ ಕಛೇರಿ ಮುಂದೆ ಧರಣಿ ನಡೆಸಿದರು.ನಗರದ ತರಕಾರಿ ಮಾರುಕಟ್ಟೆಯಲ್ಲಿದ್ದ ಕ್ಯಾಶ್ ಕೌಂಟರ್ ಪುನರಾರಂಭಿಸಬೇಕು. ಜೊತೆಗೆ 5 ಇನ್ನೂ ಕಡೆ ಬಿಲ್ ಕಲೇಕ್ಷನ್ ಪಾಯಿಂಟ್ ತೆರೆಯಬೇಕು. ರೈತರಿಗೆ ಹಗಲು ವೇಳೆಯಲ್ಲಿ ತ್ರಿಫೆಸ್ ವಿದ್ಯುತ್ ಒದಗಿಸಬೇಕು, ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಸಿಬ್ಬಂದಿ ಇಲ್ಲ ಇದರಿಂದ ಗ್ರಾಹಕರಿಗೆ ಉತ್ತಮ ಸೇವೆ ಲಭ್ಯವಾಗುತ್ತಿಲ್ಲ. ಸಮಸ್ಯೆಗಳ ಪರಹಾರಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ತಡವಾಗಿ ಆಗಮಿಸಿದ ಬಾಗಲಕೋಟೆಯ ಹೆಸ್ಕಾ ಅಧಿಕಾರಿ ಎಸ್.ಆರ್.ಪಾಟೀಲ ಹಾಗೂ ಕುಲಕರ್ಣಿ ಅವರಿಗೆ ಪ್ರತಿಭಟನಾಕಾರರು ಘೇರಾವು ಹಾಕಿ ಹುಬ್ಬಳ್ಳಿಯಿಂದ ಅಧೀಕ್ಷಕ ಎಂಜಿನಿಯರ್ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಅಲ್ಲಿಯವರೆಗೆ ಅಧಿಕಾರಿಗಳಿಗೆ ದಿಗ್ಭಂಧನ ಹಾಕುವದಾಗಿ ಪ್ರತಿಭನಾಕಾರರು ಪಟ್ಟು ಹಿಡಿದರು. ಅಧಿಕ್ಷಕ ಎಂಜಿನಿಯರ್ ಬುಧವಾರ ಸ್ಥಳಕ್ಕೆ ಭೇಟಿ ನೀಡುವ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಹಿಂಪಡೆದರು.ಗುತ್ತಿಗೆದಾರ ಸಂಘದ ಸದಸ್ಯ ಮಹಾಂತೇಶ ಕರ್ಜಗಿ ಮಾತನಾಡಿ, ಹೆಸ್ಕಾಂ ಕಚೇರಿಯಲ್ಲಿ ಅನೇಕ ಅವ್ಯವಸ್ಥೆಗಳಿವೆ. ಹಲವಾರು ಬಾರಿ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.

ಕಂಠಿ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯನ್ನು ಗುರು ಮಹಾಂತ ಸ್ವಾಮೀಜಿ ಚಾಲನೆ ನೀಡಿದರು.

 

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಗರಾಭಿವೃದ್ದಿ ಸಮಿತಿ ಅಧ್ಯಕ್ಷ ಸಿ.ಸಿ. ಚಂದ್ರಾಪಟ್ಟಣ, ಗ್ರಾನೈಟ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ ಸಾಕಾ, ಬಿ.ಎಸ್.ಆರ್. ಕಾಂಗ್ರೆಸ್ ಮುಖಂಡ ಎಂ.ಎಸ್.ಪಾಟೀಲ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಸಾಲಿಮಠ, ಸಮಾಜ ಸೇವಕ ಗುರುನಾಥಪ್ಪ ನಾಗಲೋಟಿ, ರಕ್ಷಣಾ ವೇದಿಕೆ ಅಧ್ಯಕ್ಷ ಮಹಾಂತೇಶ ಅಂಗಡಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಶಿಕಾತ ಬಂಡರಗಲ್ಲ, ನೇಕಾರ ಹೋರಾಟ ಸಮಿತಿಯ ಅಶೋಕ ಶ್ಯಾವಿ, ವೆಲ್‌ಫೇರ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ತಾಜುದ್ದೀನ ಹುಮನಾಬಾದ ಮಾತನಾಡಿದರು.ಪ್ರತಿಭಟನೆಯಲ್ಲಿ ಶ್ರಿಕಾಂತ ರಾಜೊಳ್ಳಿ, ಚೋಳಪ್ಪ ಇಂಡಿ, ಶಂಕ್ರಪ್ಪ ಬೋರಗಿ, ಅರವಿಂದ ಮಂಗಳೂರ, ರಘು ಹುಬ್ಬಳ್ಳಿ, ನೇಕಾರ ಸಮುದಾಯಗಳ ಒಕ್ಕೂಟ, ಸಣ್ಣ ಕೈಗಾರಿಕೆಗಳ ಸಂಘ, ಗ್ಯಾರೇಜ್ ಲಿಮ್ರೋ ಸಂಸ್ಥೆ, ಆಶಾದೀಪ ಸಂಸ್ಥೆ, ವಿವಿಧ ಸಂಸ್ಥೆಗಳು ಪಾಲ್ಗೊಂಡು ತಮ್ಮ ಬೆಂಬಲ ವ್ಯಕ್ತ ಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry