ಶುಕ್ರವಾರ, ಮೇ 14, 2021
31 °C

ವಿದ್ಯುತ್‌ಗಾಗಿ ಹೂವಿನಹಿಪ್ಪರಗಿ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ನಿರಂತರ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಪೂರೈಸು ವಂತೆ ಒತ್ತಾಯಿಸಿ ಬಸವನ ಬಾಗೇವಾಡಿ ತಾಲ್ಲೂಕಿನ ಹೂವಿನ ಹಿಪ್ಪರಗಿ ಗ್ರಾಮಸ್ಥರು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ಯ ನೇತೃತ್ವದಲ್ಲಿ ಸೋಮವಾರ ಬಂದ್ ಆಚರಿಸಿದರು.ಗ್ರಾಮದ ರೈತರು, ವ್ಯಾಪಾರಸ್ಥರು ಮತ್ತು ಶಾಲಾ-ಕಾಲೇಜುಗಳವರು, ವಾಹನ ಮಾಲೀಕರು ಬಂದ್‌ಗೆ ಬೆಂಬಲ ಸೂಚಿಸಿದರು. ಪ್ರತಿಭಟನಾಕಾರರು ಪ್ರಮುಖ ಬೀದಿಯಿಂದ ಮೆರವಣಿ ಗೆಯಲ್ಲಿ ಹೆಸ್ಕಾಂ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದರು. ಮನವಿಗೆ ಸ್ಪಂದಿ ಸಿದ ಅಧಿಕಾರಿಗಳು ಒಂದು ವಾರದಲ್ಲಿ ನಿರಂತರ ವಿದ್ಯುತ್ ಪೂರೈಸುವುದಾಗಿ ಲಿಖಿತ ಭರವಸೆ ನೀಡಿದರು.ಗ್ರಾಮದಲ್ಲಿ ನಿರಂತರ ಜ್ಯೋತಿ ಕಾಮಗಾರಿ ಪೂರ್ಣಗೊಂಡು ನಾಲ್ಕು ತಿಂಗಳಾಗಿದೆ. ಆದರೂ, ವಿದ್ಯುತ್ ಪೂರೈ ಸುತ್ತಿಲ್ಲ. ಹೆಸ್ಕಾಂ ಕಚೇರಿಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸು ತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮುತ್ತುರಾಜ ಕೊಂಡಗೂಳಿ, ಬಸವ ರಾಜ ತಾಳಿಕೋಟಿ, ಬಾಬುರಾವ ಪತ್ತಾರ, ಆನಂದ ಕಾಖಂಡಕಿ, ರವಿ ಹಿರೇಮಠ, ಶಿವಾನಂದ ಗುಂಡಾನವರ, ಸಿದ್ದು ಮೇಟಿ, ಮುರಗೇಶ ನಾಗಮೋತಿ, ಶ್ರಿಶೈಲ ತಾಳಿಕೋಟಿ, ಈರಯ್ಯ ಹಿರೇ ಮಠ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.