ವಿದ್ಯುತ್‌ಚಾಲಿತ ಕಾರು

7

ವಿದ್ಯುತ್‌ಚಾಲಿತ ಕಾರು

Published:
Updated:

ವಾಷಿಂಗ್ಟನ್ (ಐಎಎನ್‌ಎಸ್): ಜಗತ್ತಿನ ಪ್ರಪ್ರಥಮ ಸಂಪೂರ್ಣ ವಿದ್ಯುತ್‌ಚಾಲಿತ ಬಾಡಿಗೆ ಕಾರು ಶೀಘ್ರದಲ್ಲೇ ಅಮೆರಿಕದಲ್ಲಿ ರಸ್ತೆಗೆ ಇಳಿಯಲಿದೆ.ಪರಿಸರಸ್ನೇಹಿ ವಾಹನಗಳು ಅಮೆರಿಕದ ಸಾರಿಗೆ ಕ್ಷೇತ್ರದಲ್ಲಿ ಪ್ರಮುಖ ಸಾಧನವಾಗಿ ಬಳಕೆಯಾಗುತ್ತಿರುವುದರ ಸಂಕೇತ ಇದಾಗಿದ್ದು, ಈ ಕಾರು ಶೀಘ್ರದಲ್ಲೇ ವರ್ಜೀನಿಯಾದ ಅರ್ಲಿಂಗ್ಟನ್‌ನ ರಸ್ತೆ ಮೇಲೆ ಕಾಣಿಸಿಕೊಳ್ಳಲಿದೆ.`ಈ ಕಾರನ್ನು ರೂಪಿಸಿದ ಮೊದಲ ಕೀರ್ತಿ ನಮ್ಮದು. ಅಮೆರಿಕದಲ್ಲಿ ಸಂಚರಿಸಲಿರುವ ಮೊದಲ ವಿದ್ಯುತ್‌ಚಾಲಿತ ಬಾಡಿಗೆ ಕಾರು ಇದಾಗಲಿದೆ~ ಎಂದು ಈ ಕಾರನ್ನು ತಯಾರಿಸಿರುವ ಮಲಿಕ್ ಖಟಕ್ ಹೇಳಿದ್ದಾರೆ.

ಐಪ್ಯಾಡ್, ವೈರ್‌ಲೆಸ್, ಇಂಟರ್‌ನೆಟ್ ಬ್ರೌಸಿಂಗ್, ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸುವ ವ್ಯವಸ್ಥೆ ಈ ಕಾರಿನಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry