ವಿದ್ಯುತ್‌ ಯೋಜನೆಗೆ ರೂ 920 ಕೋಟಿ ನೆರವು

7
ಲೈಬೀರಿಯಾ ಅಧ್ಯಕ್ಷೆ ಎಲೆನ್‌ ಜಾನ್ಸನ್‌ ಸಿರ್ಲೀಫ್‌– ಪ್ರಧಾನಿ ಸಿಂಗ್‌ ಭೇಟಿ

ವಿದ್ಯುತ್‌ ಯೋಜನೆಗೆ ರೂ 920 ಕೋಟಿ ನೆರವು

Published:
Updated:

ನವದೆಹಲಿ (ಪಿಟಿಐ): ಪಶ್ಚಿಮ ಆಫ್ರಿಕಾ ರಾಷ್ಟ್ರವಾಗಿರುವ ಲೈಬೀರಿಯಾದಲ್ಲಿ ವಿದ್ಯುತ್‌ ಪ್ರಸರಣ ಮತ್ತು ಪೂರೈಕೆ ಯೋಜನೆಗೆ ಭಾರತವು 920.6 ಕೋಟಿ (14.4 ಕೋಟಿ ಡಾಲರ್‌) ಆರ್ಥಿಕ ನೆರವು ನೀಡಲಿದೆ. ಭಾರತ ಪ್ರವಾಸದಲ್ಲಿರುವ ಲೈಬೀರಿಯಾ ಅಧ್ಯಕ್ಷೆ ಎಲೆನ್‌ ಜಾನ್ಸನ್‌ ಸಿರ್ಲೀಫ್‌ ಹಾಗೂ ಪ್ರಧಾನಿ ಮನ­ಮೋಹನ್‌ ಸಿಂಗ್‌ ಅವರು ಈ ಸಂಬಂಧದ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿದರು.

ಇದೇ ಸಂದರ್ಭದಲ್ಲಿ ಪ್ರಮುಖ ವಿದ್ಯುತ್‌ ಯೋಜನೆ­ಯೊಂದರ ಒಪ್ಪಂದಕ್ಕೂ ಉಭಯ ನಾಯಕರು ಸಹಿ ಹಾಕಿದರು. ಭೇಟಿಯ ಸಂದರ್ಭದಲ್ಲಿ ಉಭಯ ನಾಯಕರು ಇಂಡೋ–ಆಫ್ರಿಕಾ ಫೋರಂ ಶೃಂಗಸಭೆ ಸೇರಿದಂತೆ ಅಂತರ­ರಾಷ್ಟ್ರೀಯ, ಪ್ರಾದೇಶಿಕ ಮತ್ತು ದ್ವಿಪಕ್ಷೀಯ ಸಂಬಂಧ ವಿಚಾರಗಳ ಬಗ್ಗೆ ಚರ್ಚಿಸಿದರು.

‘ಕೃಷಿ ಸಂಶೋಧನೆ, ಆರೋಗ್ಯ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಮತ್ತಷ್ಟು ಉತ್ತೇಜನ ನೀಡಲು ನಾವು ನಿರ್ಧರಿಸಿದ್ದೇವೆ’ ಎಂದು ಪ್ರಧಾನಿ ಸಿಂಗ್‌ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ವಿದ್ಯುತ್‌ ಯೋಜನೆಗಳ ಒಪ್ಪಂದ ಹೊರತಾಗಿ,  ಜಂಟಿ ಆಯೋಗ ರಚನೆ ಮತ್ತು 2 ರಾಷ್ಟ್ರಗಳ ವಿದೇಶಿ ಸೇವೆಗಳ ಸಂಸ್ಥೆಗಳ ನಡುವೆ ಒಪ್ಪಂದಕ್ಕೆ ಬರಲು ಎರಡೂ ರಾಷ್ಟ್ರಗಳು ಸಮ್ಮತಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry