ಗುರುವಾರ , ಮೇ 13, 2021
39 °C

ವಿದ್ಯುತ್ ಅವಘಡ: ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೀಸಾವೆ: ವಿದ್ಯುತ್ ಅವಘಡದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ತಕ್ಷಣ ಪರಿಹಾರ ನೀಡುವಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಸೋಮವಾರ ಸೆಸ್ಕ್ ಅಧಿಕಾರಿಗಳನ್ನು ಒತ್ತಾಯಿಸಿದರು.ಭಾನುವಾರ ಸಂಜೆ ವಿದ್ಯುತ್ ವ್ಯತ್ಯಯದಿಂದ ಸಮೀಪದ ಚಿಕ್ಕೋನಹಳ್ಳಿ ಗ್ರಾಮದ ಮಧು(30) ಎಂಬವರು ಮೃತಪಟ್ಟಿದ್ದರು. ಸೆಸ್ಕ್ ಕಾರ್ಯಪಾಲಕ ಅಭಿಯಂತರ ನಾರಾಯಣಗೌಡ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ ಬಾಲಾಜಿ ಅವರು ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು. ಸಾವಿನ ವಿಷಯ ತಿಳಿದ ಹೋಬಳಿಯ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಂಬಂಧಿಕರು ಸೆಸ್ಕ್ ಕಚೇರಿಗೆ ಆಗಮಿಸಿ ತಾತ್ಕಾಲಿಕ ಪರಿಹಾರ ನೀಡುವಂತೆ ಒತ್ತಾಯಿಸಿದರು.ದಲಿತ ಸಂಘಟನೆ ಮುಖಂಡ ಹೊನ್ನಮಾರನಹಳ್ಳಿ ಕೃಷ್ಣಪ್ಪ ಮಾತನಾಡಿ, ಕರ್ತವ್ಯದ ವೇಳೆ ಇಲಾಖೆ ನೌಕರರು ಮೃತಪಟ್ಟಾಗ ನೀಡುವ ಪರಿಹಾರದ ಮಾದರಿಯ್ಲ್ಲಲೇ ಈ ಕುಟುಂಬಕ್ಕೆ ನೆರವು ನೀಡಬೇಕು ಎಂದು ಆಗ್ರಹಿಸಿದರು.ಮುಖಂಡ ಧರ್ಮಯ್ಯ ಮಾತನಾಡಿ, ಬಡಕುಟುಂಬ ಬೀದಿಗೆ ಬಿದ್ದಿವೆ. ಮೃತನ ಪತ್ನಿಗೆ ಸೆಸ್ಕ್‌ನಲ್ಲಿ ನೌಕರಿ ನೀಡಬೇಕು ಎಂದರು.

ಸಹಾಯಕ ಕಾರ್ಯಪಾಲಕ ಅಭಿಯಂತರ ಬಾಲಾಜಿ ಮಾತನಾಡಿ, ವಿದ್ಯುತ್ ವ್ಯತ್ಯಯದಿಂದ ಮೃತಪಟ್ಟ ವರ ಕುಟುಂಬಕ್ಕೆ ಪರಿಹಾರ ನೀಡಲು ಇಲಾಖೆಯಲ್ಲಿ ಯಾವುದೇ ಅವಕಾಶವಿಲ್ಲ. ಈ ಅವಘಡದ ಬಗ್ಗೆ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ನಂತರ ಪರಿಹಾರ ನೀಡಲಾಗುವುದು ಎಂದು ಹೇಳಿದರು.ಸೆಸ್ಕ್ ನೌಕರರ ಸಂಘದಿಂದ 10 ಸಾವಿರ ರೂಪಾಯಿ ನೀಡುವುದಾಗಿ ಶಾಖಾಧಿಕಾರಿ ಲಕ್ಷ್ಮಯ್ಯ ಪ್ರಕಟಿಸಿದರು. ರಾಜ್ಯ ರೈತ ಸಂಘದ ಎಚ್.ವಿ. ಕೃಷ್ಣೇಗೌಡ,ಎಚ್.ಕೆ. ರಘು, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಎಸ್. ರವಿಕುಮಾರ ಪಾಲ್ಗೊಂಡಿದ್ದರು.ರಸ್ತೆ ಉಬ್ಬು ನಿರ್ಮಿಸಲು ಶಾಸಕ ಸೂಚನೆ

ಹಿರೀಸಾವೆ: ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಿಗೂ ಮತ್ತು ಪಟ್ಟಣದ ಆಸ್ಪತ್ರೆ ಮುಭಾಗದ ರಸ್ತೆ ಉಬ್ಬು ನಿರ್ಮಿಸಲು ಸೂಚನೆ ನೀಡುವುದಾಗಿ ಶಾಸಕ ಸಿ.ಎನ್. ಬಾಲಕೃಷ್ಣ ಸೋಮವಾರ ಹೇಳಿದರು.

ಹೋಬಳಿಯಲ್ಲಿ ಭಾನುವಾರ ರಾತ್ರಿ ನಡೆದ ಮೂರು ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಸೋಮವಾರ ಮೃತರ ಸಂಬಂಧಿಕರಿಗೆ ಸ್ವಾಂತನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ತಾಲ್ಲೂಕಿನಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚಾತ್ತಿವೆ. ವಾಹನಗಳ ವೇಗ ನಿಯಂತ್ರಿಸಲು ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ತಾಲ್ಲೂಕಿನಲ್ಲಿ ವಿದ್ಯುತ್ ಪರಿವರ್ತಕಗಳ ಕೊರತೆ ಇದೆ. ಹಲವು ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ಅಪಾರ ಹಾನಿ ಸಂಭವಿಸುತ್ತಿದೆ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.