ವಿದ್ಯುತ್ ಉತ್ಪಾದನೆ: ಖರ್ಗೆ ಬಹಿರಂಗ ಸವಾಲು

7

ವಿದ್ಯುತ್ ಉತ್ಪಾದನೆ: ಖರ್ಗೆ ಬಹಿರಂಗ ಸವಾಲು

Published:
Updated:

ನವದೆಹಲಿ: ~ರಾಜ್ಯದಲ್ಲಿ ಯಾರ್ಯಾರ ಅವಧಿಯಲ್ಲಿ ಎಷ್ಟು ವಿದ್ಯುತ್ ಉತ್ಪಾದನೆ ಆಗಿದೆ~ ಎಂಬುದನ್ನು ಬಿಜೆಪಿ ಸರ್ಕಾರ ಬಹಿರಂಗ ಮಾಡಲಿ ಎಂದು ಕಾರ್ಮಿಕ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.ವಿದ್ಯುತ್ ಸಮಸ್ಯೆಗೆ ಬಿಜೆಪಿ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಮೂರು ವರ್ಷದಿಂದ ಬಿಜೆಪಿ ಆಡಳಿತ ನಡೆದಿದೆ. ಅದಕ್ಕೂ ಹಿಂದೆ ಎರಡು ವರ್ಷ ಜೆಡಿಎಸ್ ಜತೆ ಸಮ್ಮಿಶ್ರ ಸರ್ಕಾರದಲ್ಲಿ ಭಾಗಿಯಾಗಿದೆ. ಈ ಐದೂವರೆ ವರ್ಷದಲ್ಲಿ ಎಷ್ಟು ಯೂನಿಟ್ ವಿದ್ಯುತ್ ಹೆಚ್ಚುವರಿಯಾಗಿ ಉತ್ಪಾದಿಸಲಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಲಿ ಎಂದು ಖರ್ಗೆ ತಾಕೀತು ಮಾಡಿದರು.ಕಾಂಗ್ರೆಸ್ ಸರ್ಕಾರದಲ್ಲಿ ರೂಪಿಸಲಾಗಿದ್ದ ವಿದ್ಯುತ್ ಯೋಜನೆಗಳನ್ನೇ ಈ ಸರ್ಕಾರ ಉದ್ಘಾಟಿಸಿದೆ ವಿನಾ ಹೊಸ ಯೋಜನೆಮಾಡಿಲ್ಲ. ಕಾಂಗ್ರೆಸ್ ಸರ್ಕಾರದಂತೆ ಈಗಿನ ಸರ್ಕಾರ ಕೆಲಸ ಮಾಡಿದ್ದರೆ ವಿದ್ಯುತ್ ಬಿಕ್ಕಟ್ಟು ಇರುತ್ತಿರಲಿಲ್ಲ ಎಂದು  ಕಿಡಿ ಕಾರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry