ಗುರುವಾರ , ಏಪ್ರಿಲ್ 15, 2021
20 °C

ವಿದ್ಯುತ್ ಉಳಿತಾಯಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್ : ವಿದ್ಯುತ್ ಉಳಿತಾಯದ ತಂತ್ರಜ್ಞಾನದತ್ತ ಸಾರ್ವಜನಿಕರು ಹೆಚ್ಚಿನ ಗಮನ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಟಿ.ದಯಾನಂದರೆಡ್ಡಿ ನುಡಿದರು.

ತಾಲ್ಲೂಕಿನ ಹೀಲಲಿಗೆ ಸಮೀಪದ ಅಂದಾಪುರದ ಅಷ್ಠಲಕ್ಷ್ಮಿ ದೇವಾಲಯದ ಬಳಿ ನಡೆದ ಕಾರ್ಯಕ್ರಮದಲ್ಲಿ ಅಶೋಕ ಎಲ್.ಇ.ಡಿ ಬಲ್ಬ್ ಬಿಡುಗಡೆ ಮಾಡಿ ಮಾತನಾಡಿದರು. ವಿದ್ಯುತ್ ಉಳಿತಾಯ ಮಾಡಿದರೆ ವಿದ್ಯುತ್ ಉತ್ಪಾದನೆ ಮಾಡಿದಂತೆ ಎಂಬುದನ್ನು ಜನರು ಮನಗಾಣಬೇಕು.ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನ ಎ.ಜಿ.ಎಂ ಸುಬ್ಬರಾವ್ ಮಾತನಾಡಿ, ಗೃಹ ಬಳಕೆಯಲ್ಲಿ ಉಪಯೋಗಿಸುವ ವಿದ್ಯುತ್‌ನಿಂದ ಹೆಚ್ಚಿನ ಹೊರೆ ಬರುತ್ತಿದೆ. ಎಲ್ಲಾ ಕುಟುಂಬಗಳೂ ವಿದ್ಯುತ್ ಉಳಿತಾಯ ಮಾಡುವ ತಂತ್ರವನ್ನು ಅಳವಡಿಸಿಕೊಂಡರೆ ರಾಜ್ಯ ವಿದ್ಯುತ್ ಕೊರತೆ ಪರಿಹಾರಕ್ಕೆ ನೆರವಾಗಲಿದೆ ಎಂದರು.ಎಲ್.ಇ.ಡಿ ಬಲ್ಬ್ ತಂತ್ರಜ್ಞ ಅರವಿಂದ್ ಮಾತನಾಡಿ ಎಲ್.ಇ.ಡಿ ಬಲ್ಬ್‌ಗಳು ಪರಿಸರ ಸ್ನೇಹಿಯಾಗಿವೆ. ಇವುಗಳಲ್ಲಿ ಪಾದರಸದ ಬಳಕೆಯಿಲ್ಲ. ಹಾಗೂ ಶೇ. 80ರಷ್ಟು ವಿದ್ಯುತ್ ಉಳಿತಾಯ ಮಾಡುವ ರೀತಿಯಲ್ಲಿ  ರೂಪಿಸಲಾಗಿದೆ ಎಂದರು. ರಾಜ್ಯದಲ್ಲಿ ವಿದ್ಯುತ್ ಅಭಾವ ಹೆಚ್ಚಾಗಿ ತಲೆದೋರಿದೆ. ಹಾಗಾಗಿ ವಿದ್ಯುತ್‌ಗೆ ಚಿನ್ನದ ಬೆಲೆಯಿದ್ದು, ವಿದ್ಯುತ್ ಉಳಿತಾಯ ಮಾಡುವ ಎಲ್ಲಾ ಪ್ರಯತ್ನಗಳಿಗೆ ಸರ್ಕಾರ ಹಾಗೂ ಸಾರ್ವಜನಿಕರು ಪ್ರೋತ್ಸಾಹ ನೀಡಬೇಕು ಎಂದರು.ಜಿ.ಪಂ ಸದಸ್ಯ ಪ್ರಭಾಕರ್, ನೆರಿಗಾ ಗ್ರಾ.ಪಂ ಅಧ್ಯಕ್ಷ ರಾಮು, ಮುಖಂಡರಾದ ನಾರಾಯಣಸ್ವಾಮಿ ಮೊದಲಿಯಾರ್, ಗ್ರಾ.ಪಂ ಸದಸ್ಯ ಪುಟ್ಟರಾಜು, ಸುರೇಶ್ ಮತ್ತಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.