ಮಂಗಳವಾರ, ನವೆಂಬರ್ 19, 2019
29 °C

ವಿದ್ಯುತ್ ಕಂಬದ ಅಪಾಯ ತಪ್ಪಿಸಿ

Published:
Updated:

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ದೇವನಾಥಾಚಾರ್ ಸ್ಟ್ರೀಟ್‌ಗೆ ಸೇರಿರುವ ವೆಂಕಟರಾಮ್ ನಗರದಲ್ಲಿ ನೂರಾರು ಬಡ ಕುಟುಂಬಗಳು ವಾಸವಿದ್ದಾರೆ. ಇಲ್ಲಿನ ರಸ್ತೆಗಳು ಬಹಳ ಕಿರಿದಾಗಿವೆ. ಮೂಲಸೌಕರ್ಯಗಳು ಸರಿಯಾಗಿಲ್ಲ. ಈ ಎಲ್ಲ ಕಾರಣಗಳಿಂದ ಈ ವಸತಿ ಪ್ರದೇಶ ಈಗ ಒಂದು ಕೊಳಚೆ ಪ್ರದೇಶದ ರೂಪ ಪಡೆದುಕೊಂಡಿದೆ.ಅದೂ ಅಲ್ಲದೇ ಈ ಪ್ರದೇಶದಲ್ಲಿ ವಾವಿರುವ ಕೆಲವರ ಮನೆ ಮುಂದೆ ಹತ್ತಾರು ಮನೆಗಳಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಗಳು, ಪೈಪ್‌ಗಳು ಕಂಬದಲ್ಲಿದ್ದು ಹಲವು ಮನೆಗಳಿಗೆ ಇದು ಒತ್ತರಿಸಿಕೊಂಡಿದೆ. ಮಳೆಗಾಲದಲ್ಲಿ ಇಂತಹ ಕಂಬಗಳಿಂದ ಅಪಾಯ ಕಟ್ಟಿಟ್ಟದ್ದು. ಅಪಾಯ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಬಿಬಿಎಂಪಿಯವರು ಕೂಡಲೇ ಎಚ್ಚೆತ್ತುಕೊಂಡು ಬೆಸ್ಕಾಂ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಈ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕು.

- ಕೆ. ಎಸ್. ನಾಗರಾಜ್ಬಸ್ ನಿಲ್ದಾಣ ಬದಲಾವಣೆ

ಬ್ಯಾಂಕ್ ಕಾಲೊನಿ ಮುಖಾಂತರ ಬರುವ ಶ್ರೀನಗರದಿಂದ 201ನೇ ಮಾರ್ಗದ ಸಂಖ್ಯೆಯ ಬಸ್ಸು, ಜಯದೇವ ಆಸ್ಪತ್ರೆ ಮೂಲಕ ದೊಮ್ಮಲೂರಿಗೆ ಹಾದು ಹೋಗುತ್ತದೆ. ಆದರೆ ಜಯದೇವ ಆಸ್ಪತ್ರೆಯ ನಿಲ್ದಾಣ ಇನ್ನೂ ಸಾಕಷ್ಟು ದೂರವಿದೆ ಎನ್ನುವಾಗಲೇ ಬಸ್ ನಿಲುಗಡೆ ಮಾಡುತ್ತಾರೆ. ವಯಸ್ಸಾದವರು ಅಲ್ಲಿಂದ ಜಯದೇವ ಆಸ್ಪತ್ರೆಗೆ ನಡೆಯಲು ತುಂಬಾ ಕಷ್ಟವಾಗುತ್ತದೆ.

ಆದುದರಿಂದ ಮಾರ್ಗ ಸಂಖ್ಯೆ 201ಬಸ್ ಜಯದೇವ ಆಸ್ಪತ್ರೆಯ ಬಳಿ ನಿಲ್ಲಿಸಿದರೆ ವಯಸ್ಸಾದವರಿಗೆ ಮತ್ತು ರೋಗಿಗಳಿಗೆ ಅನುಕೂಲವಾಗುತ್ತದೆ. ದಯವಿಟ್ಟು ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸ್ಥಳ ತಪಾಸಣೆ ಮಾಡಿ ಬಸ್ ನಿಲ್ದಾಣವನ್ನು ಸ್ಥಳಾಂತರ ಮಾಡಬೇಕೆಂದು ವಿನಂತಿ.

- ಎಚ್. ಪ್ರಹ್ಲಾದರಾವ್

ಪ್ರತಿಕ್ರಿಯಿಸಿ (+)