ಶನಿವಾರ, ಆಗಸ್ಟ್ 15, 2020
21 °C

ವಿದ್ಯುತ್ ಕಂಬ ಸರಿಪಡಿಸಿ

- ಇದೇ ಪ್ರದೇಶದ ನಿವಾಸಿಗಳು Updated:

ಅಕ್ಷರ ಗಾತ್ರ : | |

ವಿದ್ಯುತ್ ಕಂಬ ಸರಿಪಡಿಸಿ

ಬಿನ್ನಿಮಿಲ್ ರಸ್ತೆಯ ಒಂದನೇ ಅಡ್ಡರಸ್ತೆ (ಗಂಗಾನಗರ ಎಕ್ಸ್‌ಟೆನ್ಷನ್)ಯಲ್ಲಿ ವಿದ್ಯುತ್ ಕಂಬವೊಂದು ನಡುರಸ್ತೆಗೆ ಬಂದಿರುವ ಪರಿ ಹೇಗಿದೆ ನೋಡಿ. ಕಂಬ ಹೇಗೆ ರಸ್ತೆಗೆ ಬಂತು ಎಂದುಕೊಂಡಿರಾ? ಕಂಬ, ಈ ಹಿಂದೆ ರಸ್ತೆ ಬದಿಯಲ್ಲಿ ಸುರಕ್ಷಿತವಾಗಿಯೇ ಇತ್ತು.

ಆದರೆ ಅಲ್ಲೊಬ್ಬರು ಮನೆ ಕಟ್ಟಲಾರಂಭಿಸಿದ್ದೇ ಕಂಬವನ್ನೇ ನಡುರಸ್ತೆಗೆ ಎತ್ತಂಗಡಿ ಮಾಡಿಬಿಟ್ಟರು. ಇದರಿಂದಾಗಿ ಕೆಲವು ಮನೆಗಳ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಮೊದಲೇ ಇಕ್ಕಟ್ಟಿನ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಕಷ್ಟಪಟ್ಟು ಸಂಚರಿಸುತ್ತಿದ್ದರು.

ಈಗ ಇಲ್ಲಿನ ಪರಿಸ್ಥಿತಿ ಹೇಗಾಗಿರಬಹುದು ನೀವೇ ಊಹಿಸಿ. ಬೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸುವರೆಂದು ಕಾಯುತ್ತಿರುವ,

- ಇದೇ ಪ್ರದೇಶದ ನಿವಾಸಿಗಳು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.