ಸೋಮವಾರ, ಜೂನ್ 21, 2021
20 °C

ವಿದ್ಯುತ್ ಕಡಿತ: ಎಸ್‌ಎಂಎಸ್ ಮೂಲಕ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಪ್ರತಿಯೊಂದು ಫೀಡರ್‌ನಿಂದ 10 ಸಂಪರ್ಕಗಳ ಮಾಲೀಕರ ವಿಳಾಸ, ಮೊಬೈಲ್ ಸಂಖ್ಯೆ, ಈ-ಮೇಲ್ ವಿಳಾಸ ಪಡೆದುಕೊಂಡು ವಿದ್ಯುತ್ ಕಡಿತದ ಬಗ್ಗೆ ಮುಂಚೆಯೇ ಎಸ್‌ಎಂಎಸ್ ಕಳುಹಿಸುವ ಬಗ್ಗೆ ಚಿಂತನೆ ನಡೆದಿದೆ~ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ. ಬೋರೇಗೌಡ ಹೇಳಿದರು.ನಗರದ ಎಂಜಿನಿಯರುಗಳ ಸಂಸ್ಥೆ ಸಭಾಂಗಣ ದಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸೋಮವಾರ ಏರ್ಪಡಿಸಿದ್ದ ವಿದ್ಯುತ್ ಸಮಸ್ಯೆ ಮತ್ತು ಸಂಬಂಧಿತ ವಿಷಯಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಮೈಸೂರು ನಗರ ಪಾರಂಪರಿಕ ಹಿನ್ನೆಲೆ ಹೊಂದಿರು ವುದರಿಂದ ನರ್ಮ್ ಯೋಜನೆಯಡಿ ಅರಮನೆ ಸುತ್ತಲಿನ 2 ಕಿ.ಮೀ ಪ್ರದೇಶಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಅನುದಾನ ದೊರೆತಿದೆ. ಅದೇ ರೀತಿ ವಿದ್ಯುತ್ ಸೋರಿಕೆ ಮತ್ತು ಕಳ್ಳತನ ತಡೆಗಟ್ಟಲು ಕ್ರಮಕೈಗೊಳ್ಳ ಲಾಗುವುದು. ಹಳೆಯ ಟ್ರಾನ್ಸ್‌ಫಾರ್ಮರ್ ಮತ್ತು ಮೀಟರ್‌ಗಳನ್ನು ಬದಲಾಯಿಸ ಲಾಗುವುದು. ಇಕ್ಕಟ್ಟಾದ ಸ್ಥಳಗಳಲ್ಲಿ ಒಂದೇ ಕಂಬದ ಮೇಲೆ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಕ್ರಮಕೈಗೊಳ್ಳ ಲಾಗಿದ್ದು, ಈಗಾಗಲೇ 600 ಕಂಬಗಳನ್ನು ಖರೀದಿಸಲಾಗಿದೆ~ ಎಂದು ಹೇಳಿದರು.`ಅರಮನೆ ಸುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ಅಂಡರ್‌ಲೈನ್ ಕೇಬಲ್ ಅಳವಡಿಸಲು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಒಪ್ಪಿಗೆ ನೀಡಿದ್ದು, ಅಗತ್ಯ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಪಾಲಿಕೆ ಸಹಕಾರ ನೀಡಿದರೆ ಬೀದಿ ದೀಪಗಳಿಗೆ ಟೈಮರ್ ಅಳವಡಿಸಲಾಗುವುದು.ಗ್ರಾಹಕರು ಎಟಿಪಿ (ಎನಿ ಟೈಂ ಪೇಮೆಂಟ್) ಮಷಿನ್‌ವರೆಗೆ ಹೋಗುವುದನ್ನು ತಪ್ಪಿಸಲು ಪ್ರಿಪೇಯ್ಡ ಸ್ಮಾರ್ಟ್ ಕಾರ್ಡ್ ವಿತರಿಸಲು ಪೈಲಟ್ ಯೋಜನೆ ಜಾರಿಗೆ ತರಲಾಗಿದೆ. ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಆರ್‌ಆರ್ ಸಂಖ್ಯೆ ನೀಡಿದರೆ ಗ್ರಾಹಕರ ಖಾತೆಯಿಂದಲೇ ಹಣ ಪಾವತಿ ಆಗುವಂತೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ~ ಎಂದರು.`ಮೈಸೂರು ನಗರಕ್ಕೆ ವಿದ್ಯುತ್ ಖರೀದಿಗಾಗಿ ಪ್ರತಿ ತಿಂಗಳು 132 ರಿಂದ 135 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ, ಈ ಪೈಕಿ 110 ರಿಂದ 115 ಕೋಟಿ ರೂಪಾಯಿ ಮಾತ್ರ ಸಂಗ್ರಹವಾ ಗುತ್ತಿದ್ದು, 15ರಿಂದ 20 ಕೋಟಿ ನಷ್ಟವಾಗುತ್ತಿದೆ. ಆದಾಗ್ಯೂ, ಎಲ್ಲರಿಗೂ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲು ಶ್ರಮಿಸಲಾ ಗುತ್ತಿದೆ~ ಎಂದು ತಿಳಿಸಿದರು.ಸೆಸ್ಕ್ ಮುಖ್ಯ ಎಂಜಿನಿಯರ್ ಶಾಂತಿ, ಎಂಜಿನಿಯ ರುಗಳ ಸಂಸ್ಥೆ ಅಧ್ಯಕ್ಷ ಸತೀಶ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.