ಮಂಗಳವಾರ, ಮೇ 24, 2022
30 °C

ವಿದ್ಯುತ್ ಕೊರತೆಗೆ ನಿರ್ಲಕ್ಷ್ಯ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಸಂಖೆ ಹೆಚ್ಚಳವಾದಂತೆಲ್ಲಾ ವಿದ್ಯುತ್ ಬಳಸುವವರ ಸಂಖೆ ಜಾಸ್ತಿಯಾಗುತ್ತಿರುವುದು ಆಡಳಿತ ನಡೆಸುವವರಿಗೆ ತಿಳಿಯದ ಸಂಗತಿಯೇನಲ್ಲ.

ನಮಗೆಷ್ಟು ವಿದ್ಯುತ್ ಬೇಕು, ನಮ್ಮಲ್ಲಿನ ಸಂಪನ್ನೂಲ ಕೂರತೆ ಎಷ್ಟಿದೆ, ಉತ್ಪಾದನೆ ಎಷ್ಟಿದೆ ಎಂದು ಲೆಕ್ಕಾಚಾರ ಹಾಕದೆ ಪಕ್ಷದ ಆಂತರಿಕ ಬಿಕ್ಕಟ್ಟಿನ ರಾಜಕೀಯದಲ್ಲಿ ಮುಳುಗಿ ಹೋಗಿರುವ ಪರಿಣಾಮ ಸಮಸ್ಯೆಯನ್ನು ಎದುರಿಸುವಲ್ಲಿ ಸರ್ಕಾರ ವಿಫಲವಾಗಿದೆ.

ದೀಪಾವಳಿ ಸಮೀಪಿಸುತ್ತಿರುವಾಗಲೇ ರಾಜ್ಯವನ್ನು ಅಂಧಕಾರದಲ್ಲಿಟ್ಟಿರುವ ಬಿಜೆಪಿ ಸರ್ಕಾರ ಇನ್ನು ತನ್ನ ಉಳಿದ ಒಂದೂವರೆ ವರ್ಷದ ಆಡಳಿತದಲ್ಲಿ ಇನ್ನೂ ಏನೇನು ಅವಾಂತರಗಳನ್ನು ಸೃಷ್ಟಿಸುತ್ತದೆಯೋ ಗೊತ್ತಿಲ್ಲ. ನಮ್ಮಲ್ಲಿ ಕಲ್ಲಿದ್ದಲು ಕೂರತೆಯಿದೆ ಎಂದು ಹೇಳುವ ಸರ್ಕಾರ ಮೊದಲೆ ಯಾಕೆ ಅಗತ್ಯವಾದಷ್ಟು ಕಲ್ಲಿದ್ದಲನ್ನು ಸಂಗ್ರಹ ಮಾಡಲಿಲ್ಲ ಎಂಬುದಕ್ಕೆ ತೆಲಂಗಾಣ ಚಳುವಳಿಯತ್ತ ಕೈತೋರಿಸುತ್ತಿರುವುದು ಬೇಜವಾಬ್ದಾರಿ ನಡವಳಿಕೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಕಲ್ಲಿದ್ದಲು ಕೊರತೆ ಉಂಟಾಗುತ್ತಿದ್ದರೂ, ಸಚಿವೆ ಶೋಭಾ ಕರಂದ್ಲಾಜೆ ಕೊಪ್ಪಳ ವಿಧಾನಸಭೆ ಉಪಚುನಾವಣೆಯ ಪ್ರಚಾರದಲ್ಲಿ ಕಾಲಕಳೆಯಬೇಕಿತ್ತೇ? ಇದು ನಿರ್ಲಕ್ಷ್ಯವಲ್ಲವೇ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.