ಮಂಗಳವಾರ, ಮೇ 18, 2021
30 °C

ವಿದ್ಯುತ್ ತಗುಲಿ 5 ಕಾರ್ಮಿಕರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾನಗಲ್: ನೂತನ ವಿದ್ಯುತ್ ಮಾರ್ಗದ ಕಾಮಗಾರಿಯ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಹರಿದು ವಿದ್ಯುತ್ ಕಂಬದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐವರು ಕೆಲಸಗಾರರು ಗಾಯಗೊಂಡ ಘಟನೆ ತಾಲ್ಲೂಕಿನ ಸಮ್ಮಸಗಿ ಗ್ರಾಮದ ಸಮೀಪದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.ಸಮ್ಮಸಗಿ ವಿದ್ಯುತ್ ಗ್ರಿಡ್‌ಗೆ ಸಂಬಂಧಿಸಿದ ಮಂತಗಿ- ಸಮ್ಮಸಗಿ ರಸ್ತೆಯಲ್ಲಿನ ವಿದ್ಯುತ್ ನೂತನ ಮಾರ್ಗ ನಿರ್ಮಾಣದ ಕಾರ್ಯವು ಒಂದು ತಿಂಗಳಿನಿಂದ ನಡೆಯುತ್ತಿದೆ. ಈ ಕೆಲಸದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಸುಮಾರು 18 ಯುವಕರು ತೊಡಗಿಕೊಂಡಿದ್ದಾರೆ.ಎಂದಿನಂತೆ ಸಮ್ಮಸಗಿ ಗ್ರಿಡ್‌ನಿಂದ ಭಾನುವಾರ ಎಲ್.ಸಿ (ಲೈನ್ ಕ್ಲಿಯರ್) ಪಡೆದುಕೊಂಡು ಕೆಲಸಗಾರರು ಕಂಬದಲ್ಲಿ ಕಾಮಗಾರಿ ನಡೆಸುತ್ತಿದ್ದಾಗ ಸಂಜೆಯ ಹೊತ್ತಿನಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಮಾರ್ಗದಲ್ಲಿ ವಿದ್ಯುತ್ ಹರಿದಿದೆ. ತಕ್ಷಣವೇ ವಿದ್ಯುತ್ ನಿಲ್ಲಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ ಎಂದು ಕೆಲಸದಲ್ಲಿ ನಿರತರಾಗಿದ್ದ ಇತರ ಕಾರ್ಮಿಕರು ಹೇಳಿದ್ದಾರೆ.ತಾಲ್ಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದ ಸುನೀಲ ಮಂಜು ತಲಗಡ್ಡಿ (29), ರವಿ ಸಾತೇರಪ್ಪ ಹಾನಗಲ್ (25), ಭರಮೋಜಿ ಚಂದ್ರಪ್ಪ ಹಾನಗಲ್(35),  ಹನುಮಂತಪ್ಪ ಶಿವಪ್ಪ ಮಾಂಗ್ಲೆನವರ (30), ಮತ್ತು ಚೀರನಹಳ್ಳಿ ಗ್ರಾಮದ ನೂರಭಾಷಾ ಶಿಗ್ಗಾಂವ (29) ಎಂಬ ಕೆಲಸಗಾರರು ವಿದ್ಯುತ್ ಆಘಾತಕ್ಕೆ ಒಳಗಾಗಿ ಗಾಯಗೊಂಡಿದ್ದಾರೆ.  ಹಾನಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸಗೆ ಗಾಯಾಳುಗಳನ್ನು ದಾಖಲಿಸಲಾಗಿದ್ದು, ನಾಲ್ಕು ಜನರಿಗೆ ಕೈ-ಕಾಲು ಸುಟ್ಟ ಗಾಯಗಳಾಗಿದ್ದು, ಒಬ್ಬ ವಿದ್ಯುತ್ ಕಂಬದ ಮೇಲಿನಿಂದ ಬಿದ್ದ ಪರಿಣಾಮ ಬೆನ್ನುಹುರಿಯಲ್ಲಿ ಗಂಭೀರ ಗಾಯವಾಗಿದೆ.ಪ್ರಾಣಾಪಾಯದ ಭೀತಿಯಿಲ್ಲ. ಚಿಕಿತ್ಸೆಯಿಂದ ಚೇತರಿಕೊಳ್ಳಲಿದ್ದಾರೆ ಎಂದು ವೈದ್ಯಾಧಿಕಾರಿ ನಾಗರಾಜ ಕುರಿ ಪತ್ರಿಕೆಗೆ ತಿಳಿಸಿದ್ದಾರೆ. ಹಾನಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.