ವಿದ್ಯುತ್ ತಾರತಮ್ಯ : ಪ್ರತಿಭಟನೆ

7

ವಿದ್ಯುತ್ ತಾರತಮ್ಯ : ಪ್ರತಿಭಟನೆ

Published:
Updated:
ವಿದ್ಯುತ್ ತಾರತಮ್ಯ : ಪ್ರತಿಭಟನೆ

ಮುಳಬಾಗಲು: ರೈತರ ಕೊಳವೆ ಬಾವಿಗಳಿಗೆ ವಿದ್ಯುತ್ ನೀಡುವಲ್ಲಿ ತಾರ ತಮ್ಯ ಧೋರಣೆ ಖಂಡಿಸಿ ಕರ್ನಾಟಕ ರೈತ ಸೇನೆ ಕೆಇಬಿ ವೃತ್ತದಲ್ಲಿ ಮಂಗಳ ವಾರ ಪ್ರತಿಭಟನೆ ನಡೆಸಿದರು.ರೈತರ ಕೊಳವೆ ಬಾವಿಗಳಿಗೆ ಕಲ್ಪಿಸಿರುವ ವಿದ್ಯುತ್ ಸಂಪರ್ಕದಲ್ಲಿನ ತಾರತಮ್ಯ ಧೋರಣೆ ನಿವಾರಿಸಬೇಕು. ಕೃಷಿಗಾಗಿ ಪ್ರತಿ ದಿನ ಹತ್ತು ಗಂಟೆ ತಪ್ಪದೆ ವಿದ್ಯುತ್ ಸೌಲಭ್ಯ ನೀಡಬೇಕು, ವಿದ್ಯುತ್ ಸಂಪರ್ಕದ ಟಿಸಿಗಳು ಕೆಟ್ಟು ಹೋದಲ್ಲಿ ಒಂದೆರಡು ದಿನಗಳ ಅವಧಿಗೆ ವ್ಯವಸ್ಥೆ ಮಾಡಬೇಕು ಎಂದು ಸಂಘದ ಸದಸ್ಯರು ಆಗ್ರಹಿಸಿದರು.ತಾಲ್ಲೂಕಿನಲ್ಲಿ ಹಳೇ ವಿದ್ಯುತ್ ಸಂಪರ್ಕ ತುಕ್ಕುಹಿಡಿದು ಹೋಗಿದೆ. ಈ ಕೂಡಲೇ ವಿದ್ಯುತ್ ತಂತಿಗಳನ್ನು ಬದ ಲಾಯಿಸಬೇಕು.  ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ರೈತಪರ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.ಸ್ಥಳಕ್ಕೆ ಆಗಮಿಸಿದ ಉಪ ತಹಶೀಲ್ದಾರ್ ಎಂ.ಕೆ.ರಮೇಶ್ ಹಾಗೂ ಬೆಸ್ಕಾಂ ಎಇಇ ಗಣೇಶ್ ಮನವಿ ಪತ್ರ ಸ್ವೀಕರಿಸಿ ಬೇಡಿಕೆಗಳನ್ನು ಸರ್ಕಾರದ ಗಮ ನಕ್ಕೆ ತರಲಾಗುವುದೆಂದು ನುಡಿದರು. ರೈತಸೇನೆ ರಾಜ್ಯ ಘಟಕದ ಅಧ್ಯಕ್ಷ ಗೌರವಾಧ್ಯಕ್ಷ ಡಾ.ಎಸ್.ವಿ.ರಮೇಶ್, ಅಧ್ಯಕ್ಷ ಆರ್.ನಾರಾಯಣಗೌಡ, ಜಿ.ಶಂಕರಪ್ಪ.ಜಯಪ್ಪ, ನಟರಾಜ್, ಶಂಕರಪ್ಪ, ರಾಮಕೃಷ್ಣಪ್ಪ, ನಾಗರಾಜ್. ಸುಬ್ಬರಾಯಪ್ಪ, ಶ್ರೀನಿವಾಸ್, ಅತ್ತಿಹಳ್ಳಿ ಪ್ರಕಾಶ್, ಸುಬ್ರಮಣಿ  ಇತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry