ಶುಕ್ರವಾರ, ಮೇ 7, 2021
24 °C

ವಿದ್ಯುತ್ ದರ ಮತ್ತೆ ಹೆಚ್ಚಳ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಲ್ಲಿದ್ದಲು ಹಾಗೂ ಲಿಗ್ನೈಟ್ (ಕಂದು ಕಲ್ಲಿದ್ದಲು) ಮೇಲಿನ ರಾಜಧನ ಪರಿಷ್ಕರಣೆಗೆ ಕೇಂದ್ರ ಸಮ್ಮತಿ ನೀಡಿರುವುದರಿಂದಾಗಿ ವಿದ್ಯುತ್ ದರದಲ್ಲಿ ಮತ್ತಷ್ಟು ಹೆಚ್ಚಳವುಂಟಾಗುವ ಸಾಧ್ಯತೆ ಇದೆ.ರಾಜಧನ ಪರಿಷ್ಕರಣೆಯಿಂದ ವಿದ್ಯುತ್ ಕಂಪೆನಿಗಳು ಕಲ್ಲಿದ್ದಲು ಆಧರಿತ ಇಂಧನಕ್ಕೆ ಹೆಚ್ಚಿನ ದರ ನೀಡಬೇಕಾಗುವುದರಿಂದ ದರ ಏರಿಕೆ ಅನಿವಾರ‌್ಯವಾಗಬಹುದು. ಪ್ರಧಾನಿ ಡಾ. ಮನಮೋಹನ ಸಿಂಗ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಸಭೆ ತೆರಿಗೆಗಳನ್ನು ಹೊರತುಪಡಿಸಿ ಕಲ್ಲಿದ್ದಲಿಗೆ ಶೇ 14 ಹಾಗೂ ಲಿಗ್ನೈಟ್‌ಗೆ ಶೇ 6 ರಷ್ಟು ರಾಜಧನ ವಿಧಿಸುವುದಕ್ಕೆ ಅನುಮೋದನೆ ನೀಡಿತು.

 

ಕಲ್ಲಿದ್ದಲು ಹಾಗೂ ಲಿಗ್ನೈಟ್‌ಗಳ ಮೇಲಿನ ರಾಜಧನವನ್ನು ಕಳೆದ 2007ರಿಂದ ಪರಿಷ್ಕರಿಸಿರಲಿಲ್ಲ. ಖನಿಜಾಂಶ ಹೇರಳವಾಗಿರುವ ಜಾರ್ಖಂಡ, ಆಂಧ್ರ ಪ್ರದೇಶ ಹಾಗೂ ಛತ್ತೀಸ್‌ಗಡ ರಾಜ್ಯಗಳಿಂದ ಈ ಸಂಬಂಧ ಬೇಡಿಕೆ ಬಂದಿತ್ತು. ಕಲ್ಲಿದ್ದಲು ಖರೀದಿ, ಉತ್ಪಾದನೆಯಲ್ಲಿ ಸಿಂಹಪಾಲು (ಶೇ 80) ಪಡೆದಿರುವ ಭಾರತೀಯ ಕಲ್ಲಿದ್ದಲು ಸಂಸ್ಥೆ ಇದೀಗ ವಿವಿಧ ವಿದ್ಯುತ್ ಕಂಪೆನಿಗಳಿಗೆ ಕಲ್ಲಿದ್ದಲು ಸರಬರಾಜಿಗೆ ಹೆಚ್ಚಿನ ತೆರಿಗೆ ವಿಧಿಸಲಿದೆ.  ಹೊಸ ತೆರಿಗೆ ವ್ಯವಸ್ಥೆ ಸರ್ಕಾರಿ ಒಡೆತನದ ಹಾಗೂ ಖಾಸಗಿ ಕಲ್ಲಿದ್ದಲು ಕಂಪೆನಿಗಳಿಗೆ ಅನ್ವಯವಾಗಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.