ಮಂಗಳವಾರ, ನವೆಂಬರ್ 12, 2019
19 °C

`ವಿದ್ಯುತ್, ನೀರು ಸಮರ್ಪಕ ಪೂರೈಕೆಗೆ ಆದ್ಯತೆ'

Published:
Updated:

ಮಳವಳ್ಳಿ: ಮತ್ತೊಮ್ಮೆ ಶಾಸಕನಾಗಿ ಆಯ್ಕೆ ಮಾಡಿ ಸೇವೆ ಮಾಡುವ ಅವಕಾಶ ನೀಡಿದರೆ ಮೊದಲು ತಾಲ್ಲೂಕಿನ ಎಲ್ಲಾ ಭಾಗಕ್ಕೂ ಸಮರ್ಪಕ ವಿದ್ಯುತ್ ಹಾಗೂ ಕುಡಿಯುವ ನೀರು ಪೂರೈಕೆ ಮಾಡಲು ಆದ್ಯತೆ ನೀಡುವುದಾಗಿ ಮಾಜಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಅನ್ನದಾನಿ ಭರವಸೆ ನೀಡಿದರು.ತಾಲ್ಲೂಕಿನ ಮಲ್ಲಿನಾಥಪುರದಲ್ಲಿ ಈಚೆಗೆ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರೂ ಸಮರ್ಪಕ ವಿದ್ಯುತ್ ದೊರೆಯುತ್ತಿಲ್ಲ.ಕಾವೇರಿ ನದಿಯಿದ್ದರೂ ಶುದ್ಧ ಕುಡಿಯುವ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಪೂರಕವಾಗಿ ಚುನಾವಣೆಯಲ್ಲಿ ಆಯ್ಕೆಯಾದರೆ ವಿದ್ಯುತ್ ಹಾಗೂ ನೀರಿನ ಪೂರೈಕೆಗೆ ಪ್ರಥಮ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.5 ವರ್ಷಗಳಲ್ಲಿ ಶಾಸಕರಾಗಿದ್ದವರು ಮರಳಿನ ದಂಧೆ ಮಾಡುವ ಮೂಲಕ ಹಣ ಮಾಡಿದ್ದಾರೆಯೆ ಹೊರತು ಇನ್ನಾವುದೇ ಕೆಲಸಗಳನ್ನು ಮಾಡಿಲ್ಲ ಎಂದು ಆರೋಪಿಸಿದರು. ತಾ.ಪಂ. ಮಾಜಿ ಸದಸ್ಯ ನಾಗರಾಜು, ಮುಖಂಡರಾದ ಸದಾನಂದ ಇತರರು ಇದ್ದರು.

ಪ್ರತಿಕ್ರಿಯಿಸಿ (+)