ವಿದ್ಯುತ್ ಪರಿವರ್ತಕ ದುರಸ್ತಿಗೆ ಆಗ್ರಹ

7

ವಿದ್ಯುತ್ ಪರಿವರ್ತಕ ದುರಸ್ತಿಗೆ ಆಗ್ರಹ

Published:
Updated:

ರಾಮನಾಥಪುರ: ಬನ್ನಿಮರದಕೊಪ್ಪಲು ಹಾಗೂ ಗೌಡನಕೊಪ್ಪಲು ಗ್ರಾಮದಲ್ಲಿ ಕೆಟ್ಟಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ದುರಸ್ತಿಪಡಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಪಟ್ಟಣದ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಕಾಳೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗಣ್ಣ ಅವರ ನೇತೃತ್ವದಲ್ಲಿ ಮಧ್ಯಾಹ್ನ 12ರಿಂದ 2.30 ವರೆಗೆ ಧರಣಿ ಕುಳಿತ ಗ್ರಾಮಸ್ಥರು ಹಾಗೂ ಸ್ತ್ರೀಶಕ್ತಿ ಸಂಘದ ಮಹಿಳೆಯರು ಸಂಬಂಧಪಟ್ಟ ಸೆಸ್ಕ್ ಎಂಜಿನಿಯರ್, ನೌಕರರು ಹಾಗೂ ಕ್ಷೇತ್ರದ ಜನಪ್ರತಿನಿಧಿಗಳ ವಿರುದ್ದ ಘೋಷಣೆ ಕೂಗಿದರು.ಗ್ರಾಮದಲ್ಲಿ 2 ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿರುವ ಪರಿಣಾಮ ಕಳೆದ ಒಂದು ತಿಂಗಳಿನಿಂದ ಕರೆಂಟ್ ಇಲ್ಲದೇ ಗ್ರಾಮಗಳು ಕತ್ತಲೆಯಲ್ಲಿ ಮುಳು ಗಿವೆ. ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ.  ಜೊತೆಗೆ ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲದೇ ಹಾಹಾ ಕಾರ ಪಡುವಂತಾಗಿದೆ ಎಂದು ಪ್ರತಿಭಟಕಾರರು ದೂರಿದರು.ಕೆಟ್ಟಿರುವ ವಿದ್ಯುತ್ ಪರಿವರ್ತಕ ಬದಲಾಯಿಸು ವಂತೆ ಸಂಬಂಧಪಟ್ಟ ಸೆಸ್ಕ್ ಎಂಜಿನಿಯರ್‌ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಇದಲ್ಲದೇ ಸೆಸ್ಕ್ ಎಂಜಿನಿಯರ್ ಹಾಗೂ ಲೈನ್‌ಮನ್ ಅವರನ್ನು ಕೇಳಿದರೆ ಉಡಾಫೆಯಿಂದ ವರ್ತಿಸುತ್ತಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರ ಮಾತಿಗೆ ಬೆಲೆ ಇಲ್ಲವಾಗಿದೆ. ಹೀಗಾಗಿ ಕರೆಂಟ್ ಸಮಸ್ಯೆಯನ್ನು ಯಾರ ಬಳಿ ಹೇಳಬೇಕು ಎಂಬುದೇ ತೋಚದಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗಣ್ಣ ಆರೋಪಿಸಿದರು.ಸುಮಾರು 3 ಗಂಟೆಗಳ ಕಾಲ ಧರಣಿ ಕುಳಿತ ಗ್ರಾಮಸ್ಥರು ರಾಮನಾಥಪುರ ಸೆಸ್ಕ್ ಕಾರ್ಯಾಪಾಲಕ ಎಂಜಿನಿಯರ್ ಶಂಕರ್ ಸ್ಥಳಕ್ಕೆ ಬರುವತನಕ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಬಳಿಕ ಕೊಣನೂರು ಸೆಸ್ಕ್ ಉಪ ವಿಭಾಗದ ಎಂಜಿನಿಯರ್ ಈರಣ್ಣ ಅವರು ಇದೇ 12ರ ಒಳಗೆ ಕೆಟ್ಟಿರುವ ವಿದ್ಯುತ್ ಪರಿವರ್ತಕ ಬದಲಾಯಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಧರಣಿ ಹಿಂಪಡೆದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry