ಶನಿವಾರ, ಏಪ್ರಿಲ್ 10, 2021
30 °C

ವಿದ್ಯುತ್ ಪರಿವರ್ತಕ ಭಸ್ಮ: ಕತ್ತಲೆಯಲ್ಲಿ ಸುರಪುರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಪಟ್ಟಣಕ್ಕೆ ವಿದ್ಯುತ್ ಪೂರೈ ಸುವ ಸತ್ಯಂಪೇಟೆಯಲ್ಲಿರುವ 10 ಎಂ.ವಿ.ಎ. ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಬುಧವಾರ ಸುಟ್ಟು ಹೋಗಿದೆ. ಇದರಿಂದ ಅನಿಯಮಿತ ವಿದ್ಯುತ್ ನಿಲುಗಡೆ ಉಂಟಾಗಲಿದ್ದು ಮುಂದಿನ 15 ರಿಂದ 20 ದಿನಗಳವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಮತ್ತು ಕೆಪಿಟಿಸಿಎಲ್ ಮೂಲ ಗಳು ತಿಳಿಸಿವೆ.ಅಂದಾಜು 70 ಲಕ್ಷ ಮೌಲ್ಯದ ಟಿ.ಸಿ. ಇದಾಗಿದೆ. ಹೊಸ ಟಿ.ಸಿ. ತರಿಸಿ ಅಳವಡಿಸಲು ಸಾಕಷ್ಟು ಸಮಯಾ ವಕಾಶ ಬೇಕಾಗುತ್ತದೆ. ಈ ಟಿ.ಸಿ. ಮೇಲೆ ಸಾಮರ್ಥ್ಯಕ್ಕಿಂತಲೂ ಅಧಿಕ ವಿದ್ಯುತ್ ಭಾರ ಇದ್ದರಿಂದ ಟಿ.ಸಿ. ವೈಫಲ್ಯಕ್ಕೆ ಕಾರಣ ಎಂದು ಜೆಸ್ಕಾಂ ಎಇಇ ಮುರುಗೇಶ ಮಠಪತಿ ತಿಳಿಸಿದ್ದಾರೆ.ಈ ಫೀಡರ್‌ನಿಂದ ಪುರಸಭೆ ವ್ಯಾಪ್ತಿಯ ಸುರಪುರ, ರಂಗಂಪೇಟೆ ಮತ್ತು ಗ್ರಾಮೀಣ ಪ್ರದೇಶಗಳಾದ ಕೃಷ್ಣಾಪುರ, ಹೆಮನೂರ, ಲಕ್ಷ್ಮೀಪುರ ಇತರ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಪಟ್ಟಣಕ್ಕೆ ನೀರು ಪೂರೈಸುವ ಜಾಕ್‌ವೆಲ್‌ಗೆ ಇದೇ ಫೀಡರ್‌ನಿಂದ ಎಕ್ಸ್‌ಪ್ರೆಸ್ ಲೈನ್ ಒದಗಿಸಲಾಗಿತ್ತು.ಈಗ ಗ್ರಾಮೀಣ ಪ್ರದೇಶಗಳ ಟಿ.ಸಿ. ಗಳಿಂದ ಜೆ.ಓ.ಎಸ್. ತೆಗೆದುಕೊಂಡು ಪಟ್ಟಣಕ್ಕೆ ವಿದ್ಯುತ್ ಒದಗಿಸಲಾಗು ತ್ತಿದೆ. ಪಟ್ಟಣಕ್ಕೆ 12 ಗಂಟೆ ಮತ್ತು ಗ್ರಾಮೀಣ ಪ್ರದೇಶಗಳಿಗೆ 6 ಗಂಟೆ ವಿದ್ಯುತ್ ಪೂರೈಕೆ ಮಾತ್ರ ಸಾಧ್ಯವಾಗ ಲಿದೆ. ವಿದ್ಯುತ್ ನಿಲುಗಡೆ ಅನಿಯಮಿತ ವಾಗಿ ಯಾವಾಗ ಬೇಕಾದರೂ ಆಗಬಹುದು. ಕಾರಣ ಗ್ರಾಹಕರು ಸಹರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.ತೊಂದರೆ: ಟಿ.ಸಿ. ವೈಫಲ್ಯದಿಂದ ಪಟ್ಟಣ ಮತ್ತು ಇದಕ್ಕೆ ಸಂಬಂಧಿಸಿದ ಗ್ರಾಮೀಣ ಜನರು ತೀವ್ರ ಪರದಾಡು ವಂತಾಗುತ್ತದೆ. ನೀರು ಪೂರೈಕೆ ಸಾಧ್ಯವಾಗದೆ ಜನ ಹಪಹಪಿಸುವಂತಾಗುತ್ತದೆ. ಬೇಸಿಗೆಯ ಬಿಸಿಲು ಪ್ರಖರವಾಗುತ್ತಿ ರುವುದರಿಂದ ಜನ ತತ್ತರಗೊಳ್ಳು ವಂತಾಗುತ್ತದೆ. ಹಿಟ್ಟು ಬೀಸಲು, ಖಾರ ಕುಟ್ಟಿಸಲು ತೊಂದರೆಯಾ ಗುತ್ತದೆ. ಪರೀಕ್ಷೆಗಳು ಹತ್ತಿರ ಇರುವುದರಿಂದ ವಿದ್ಯಾರ್ಥಿ ಗಳಿಗೆ ಸಮಸ್ಯೆಯಾಗುತ್ತದೆ ಎಂದು ಜನ ಹೇಳುತ್ತಾರೆ.ಆರೋಪ: ಟಿ.ಸಿ. ವೈಫಲ್ಯಕ್ಕೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ. ನಿಯಮಿತವಾಗಿ ಟಿ.ಸಿ.ಗೆ ಆಯಿಲಿಂಗ್ ಮತ್ತು ಸರ್ವಿಸಿಂಗ್ ಮಾಡಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿದ್ದಿಲ್ಲ. ನಾಗರಿಕ ರೊಂದಿಗೆ ಜೆಸ್ಕಾಂ ಸಿಬ್ಬಂದಿ ಚಕ್ಕಂದ ವಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಿಡ್ಡಪ್ಪ ಜಾಲಗಾರ್ ಆರೋಪಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.