ಭಾನುವಾರ, ಜೂನ್ 20, 2021
26 °C

ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ಸಮರ್ಪಕ ವಿದ್ಯುತ್ ಪೂರೈಕೆ, ನಿರಂತರ 3 ಫೇಸ್ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಆನವಟ್ಟಿ ಹೋಬಳಿಯ ನೂರಾರು ರೈತರು, ವರ್ತಕರು, ಉದ್ಯಮಿಗಳು ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆಯಿತು.ಕಳೆದ ಕೆಲ ವಾರಗಳಿಂದ ವಿದ್ಯುತ್ ಪೂರೈಕೆ ಸಂಪೂರ್ಣ ಹದಗೆಟ್ಟಿದೆ. ಬೆಳೆಗಳು ಒಣಗಲಾರಂಭಿಸಿವೆ. ಇಂತಹ ಸಂದರ್ಭದಲ್ಲಿ ದಿನಕ್ಕೆ ಕೆಲವೇ ಕೆಲವು ತಾಸು ಸಹ ಪೂರೈಕೆ ಆಗುತ್ತಿಲ್ಲ. ನೀರು ಒದಗಿಸುವುದು ಅಸಾಧ್ಯ ಆಗಿದೆ. ಪರೀಕ್ಷೆಗಳು ನಡೆಯುತ್ತಿದ್ದು, ಇಲಾಖೆಗೆ ಸ್ವಲ್ಪವೂ ಸ್ಪಂದನೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆನವಟ್ಟಿಯ 33 ಕೆವಿ ಘಟಕವನ್ನು ಪುನಃ ಆರಂಭಿಸುವಂತೆ, ಕೋಟಿಪುರದ ಗ್ರಿಡ್‌ಗೆ 10 ಎಂಎ ಪರಿವರ್ತಕವನ್ನು ಹೆಚ್ಚುವರಿಯಾಗಿ ಅಳವಡಿಸುವಂತೆ ದಿನಕ್ಕೆ ಕನಿಷ್ಠ 6 ತಾಸು ನಿರಂತರ 3 ಪೇಸ್ ಪೂರೈಕೆ ಆಗಬೇಕು ಎಂದು ಪಟ್ಟು ಹಿಡಿದರು.ಮೆಸ್ಕಾಂ ಎಸ್‌ಇ ಓಂಕಾರಪ್ಪ ಮಾತನಾಡಿ, ತಾಲ್ಲೂಕಿನಲ್ಲಿ 318 ಸಕ್ರಮ ಪಂಪ್‌ಸೆಟ್‌ಗಳಿದ್ದರೆ, 600ಕ್ಕೂ ಹೆಚ್ಚು ಅಕ್ರಮ ಸೆಟ್‌ಗಳಿವೆ. 80 ಮೆಗಾವ್ಯಾಟ್ ಖರ್ಚಾಗುತ್ತಿದ್ದು, 37 ಮೆಗಾವ್ಯಾಟ್ ಮಾತ್ರ ದಾಖಲಾಗುತ್ತಿದೆ. ಅಕ್ರಮ ಸಂಪರ್ಕ ಸಕ್ರಮಗೊಂಡಲ್ಲಿ ಸಮರ್ಪಕ ವಿದ್ಯುತ್ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಪ್ರತಿ ದಿನ ಬೆಳಿಗ್ಗೆ 6ರಿಂದ 12, 12 ರಿಂದ ಸಂಜೆ 6ರವರೆಗೆ ನಿರಂತರ 3 ಫೇಸ್, ನಂತರ ಬೆಳಗಿನವರೆಗೆ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.ರಾಜ್ಯ ರೈತಸಂಘದ ತಾಲ್ಲೂಕು ಅಧ್ಯಕ್ಷ ವೀರಭದ್ರಪ್ಪಗೌಡ, ಬಾಸೂರು ಚಂದ್ರೇಗೌಡ, ಪಿ.ಎಸ್. ಮಂಜಣ್ಣ, ಚೌಟಿ ಚಂದ್ರಣ್ಣ, ವೀರೇಶ್ ಕೊಟಿಗೇರ್, ಮಹೇಶ್ವರಪ್ಪ ಮೂಡಿ, ಪರಶುರಾಮ್, ವೈಕುಂಠ ಕಾಮತ್ ಕೆರೆಹಳ್ಳಿ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.