ಶುಕ್ರವಾರ, ಮೇ 7, 2021
25 °C

ವಿದ್ಯುತ್ ಪೂರೈಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು: ರೈತರ ಪಂಪ್‌ಸೆಟ್‌ಗಳಿಗೆ ಉತ್ತಮ ಗುಣಮಟ್ಟದ ತ್ರಿಫೇಸ್ ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ಇಲ್ಲಿಯ ಹೆಸ್ಕಾಂ ವಲಯ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ  ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು  ಪ್ರತಿಭಟಿಸಿದರು.`ಬರಗಾಲ ಬವಣೆಯಿಂದ ರೈತರು ತೀವ್ರ ಕಂಗಾಲಾಗಿದ್ದಾರೆ. ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ಯಾಗದೇ ಪರಿವರ್ತಕ(ಟ್ರಾನ್ಸ್‌ಫಾರ್ಮರ್) ಗಳು  ಸುಟ್ಟು ಹೋಗುತ್ತಿವೆ. ನೂತನ ಪರಿವರ್ತಕಗಳನ್ನು ಪೂರೈಸಲು ಅಧಿಕಾರಿಗಳು ಮೀನ ಮೇಷ ಎಣಿಸುತ್ತಿದ್ದಾರೆ~ ಎಂದು ಕೆಪಿಸಿಸಿ ಸದಸ್ಯ ಶಂಕರ ಹೊಳಿ ದೂರಿದರು.`ಗುಣಮಟ್ಟದ ತ್ರಿಫೇಸ್ ವಿದ್ಯುತ್ ಅನ್ನು ನಿಗದಿ ಪಡಿಸಿದ ಗಂಟೆಗಳ ಕಾಲ ನಿರಂತರವಾಗಿ ಹಗಲು ಹೊತ್ತಿನಲ್ಲಿ ನೀಡಬೇಕು. ಈಗಾಗಲೇ ಸುಟ್ಟು ಹೋಗಿರುವ ಪರಿವರ್ತಕಗಳನ್ನು ಬೇಗನೇ ಪೂರೈಸಬೇಕು~ ಎಂದು ಅವರು ಆಗ್ರಹಿಸಿದರು.ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಾಜಾಸಲೀಮ್ ಕಾಶೀಮನವರ ಮಾತನಾಡಿ, `ರೈತರ ಬೇಡಿಕೆಯನ್ನು ಶೀಘ್ರದಲ್ಲಿ ಈಡೇರಿಸದಿದ್ದರೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ~ ಎಚ್ಚರಿಕೆ ನೀಡಿದರು. `ಕಾರ್ಯ ನಿರ್ವಾಹಕ ಅಭಿಯಂತರ ಬಂದು ಮನವಿ ಸ್ವೀಕರಿಸಬೇಕು~ ಎಂದು ಕಾರ್ಯಕರ್ತರು ಒಂದು ಹಂತದಲ್ಲಿ ಆಗ್ರಹಿಸಿ ಹಟ ಹಿಡಿದರು.

 

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಆಗಮಿಸಿದಾಗ `ನೀವೇಕೆ ಬಂದಿರಿ~ ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು. ಅನಂತರ ಶಾಂತರಾದ ಪ್ರತಿಭಟನಾಕಾರರು ಅಂತಿಮವಾಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಿ. ಎಲ್. ಪಾಲ್ ಅವರಿಗೆ ಮನವಿ ಅರ್ಪಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸಪ್ಪ ಕಾದೊಳ್ಳಿ, ಪಡೆಪ್ಪ ಬೋಗೂರ, ಹನೀಫ್ ಸುತಗಟ್ಟಿ,  ಕಾಸೀಮ್ ನೇಸರಗಿ, ಕೆ. ಎಸ್. ನಾಡಗೌಡ, ಸುರೇಶ ಕರಿಜೀರಗಿ, ಬಸವರಾಜ ಅವರಾದಿ, ಕಲ್ಮೇಶ ಕೋಟಿ, ಬಸಲಿಂಗಪ್ಪ ಗುರವೈನವರ, ಖಾದೀರಸಾಬ್ ಸಯ್ಯದ್,  ದುಂಡಯ್ಯ ಹಿರೇಮಠ,  ಸಹದೇವ ಹಟ್ಟಿನಾಯ್ಕರ ಕಲ್ಲಪ್ಪ ತುರಮರಿ  ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.