ಸೋಮವಾರ, ಮೇ 16, 2022
30 °C

ವಿದ್ಯುತ್ ಬಳಕೆ ಮಾಹಿತಿ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವನಬಾಗೇವಾಡಿ: ಪ್ರತಿ ಮನೆಗೂ ವಿದ್ಯುತ್ ಅವಶ್ಯವಾಗಿದ್ದು ಅದನ್ನು ಮಿತವಾಗಿ ಬಳಸಬೇಕು. ಅಲ್ಲದೇ ಪ್ರತಿಯೊಬ್ಬರೂ ವಿದ್ಯುತ್ ಬಳಕೆ ಬಗ್ಗೆ ಮಾಹಿತಿ ಹೊಂದಿರಬೇಕು ಎಂದು ಉಪನ್ಯಾಸಕ ಎಸ್. ಎಸ್. ಕರಿಗೌಡರ ಹೇಳಿದರುಅವರು ತಾಲ್ಲೂಕಿನ ನಂದಿಹಾಳ (ಪಿ.ಬಿ) ಗ್ರಾಮದಲ್ಲಿ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿದ್ದ ಎನ್.ಎಸ್.ಎಸ್ ವಿಶೇಷ ಶಿಬಿರದಲ್ಲಿ `ವಿದ್ಯುತ್ ಬಳಕೆ-ಉಳಿಕೆ ಮತ್ತು ಸುರಕ್ಷತೆ~ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.ವಿದ್ಯುತ್ ಬಳಕೆ ಬಗ್ಗೆ ಮಾಹಿತಿ ಹೊಂದಿದರೆ ಆಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ವಿದ್ಯುತ್ ಪ್ರವಾಹವು ಯಾವುದೇ ಒಂದು ಉಪಕರಣ, ಅಂದರೆ ಎಲೆಕ್ಟ್ರಿಕಲ್ ಇಸ್ತ್ರಿ ಪೆಟ್ಟಿಗೆ ವೈರ್‌ನ  ಇನ್‌ಸುಲೇಶನ್ ಹಾಳಾಗುವುದರಿಂದ ಮೇಲ್ಬಾಗಕ್ಕೆ  ವಿದ್ಯುತ್ ಪ್ರವಾಹವು ಪ್ರವೇಶಿಸುತ್ತದೆ. ಇದರಿಂದ ಯಾರಾದರೂ ಇಸ್ತ್ರಿ ಪೆಟ್ಟಿಗೆ ಮೇಲ್ಭಾಗ ಮುಟ್ಟಿದಾಗ ವಿದ್ಯುತ್ ಶಾಕ್ ತಗಲುತ್ತದೆ. ಶಾಕ್ ತೀವ್ರಗತಿಯಲ್ಲಿ ಇದ್ದರೆ ಮನುಷ್ಯನ ಪ್ರಾಣಕ್ಕೆ ಅಪಾಯವಿರುತ್ತದೆ.ವಿದ್ಯುತ್‌ಗೆ ಭೂಸಂಪರ್ಕ (ಅರ‌್ಥಿಂಗ್) ಇದ್ದರೆ ಇಂತಹ ಅನಾಹುತಗಳನ್ನು ತಪ್ಪಿಸಬಹುದು.

ಆಧುನಿಕ ಯುಗದಲ್ಲಿ ಮಿನಿಯೇಚರ್ ಸರ್ಕ್ಯೂಟ್ ಬ್ರೇಕರ್ ಮತ್ತು ಅರ್ಥ್ ಲಿಕೇಜ್‌ಗಳನ್ನು ವಿದ್ಯುತ್ ಜಾಲದಲ್ಲಿ ಅಳವಡಿಸುವುದರಿಂದ ವಿದ್ಯುತ್‌ನಿಂದಾಗುವ ಅಪಘಾತಗಳನ್ನು ತಪ್ಪಿಸಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಭೂ ಸಂಪರ್ಕದ ಪ್ರಾತ್ಯಕ್ಷಿಕೆ ಕೂಡ ಮಾಡಿದರು.ಮನುಗೂಳಿಯ ಪಶು ವೈದ್ಯಾಧಿಕಾರಿ ನ್ಯಾಮಗೌಡ, ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಬರುವ ರೋಗಗಳ ಬಗ್ಗೆ ತಿಳಿದುಕೊಳ್ಳಬೇಕು. ರಾಸುಗಳ ತಳಿಗಳ ಬಗ್ಗೆ, ಹೈನುಗಾರಿಕೆ ಬಗ್ಗೆ ಮಾಹಿತಿ ಹೊಂದಿದರೆ ಆರ್ಥಿಕ ಪ್ರಗತಿಗೆ ಪೂರಕವಾಗುತ್ತದೆ ಎಂದು ಹೇಳಿದರು.ಗ್ರಾ.ಪಂ ಸದಸ್ಯ ಈರಪ್ಪ ಹಡಪದ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ ನಜೀರ ಜಹಗೀರದಾರ, ಶರಣಪ್ಪ ಕಾಟಕರ, ರಾಮಪ್ಪ ಮುತ್ತಗಿ, ಸಂತೋಷ ಕುಮಶಿ ಇದ್ದರು.

ಜಿ.ವೈ. ಚವ್ಹಾಣ ಸ್ವಾಗತಿಸಿದರು, ಎಸ್.ವಿ. ಅಗಸರ ನಿರೂಪಿಸಿದರು. ಡಿ.ಎಲ್. ಹೊಸಮನಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.