ವಿದ್ಯುತ್ ಯೋಜನೆ: ಬಿಎಚ್‌ಇಎಲ್ ಜತೆ ಒಡಂಬಡಿಕೆ ರದ್ದು

7

ವಿದ್ಯುತ್ ಯೋಜನೆ: ಬಿಎಚ್‌ಇಎಲ್ ಜತೆ ಒಡಂಬಡಿಕೆ ರದ್ದು

Published:
Updated:

ಚೆನ್ನೈ (ಐಎಎನ್‌ಎಸ್): ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ 1,600 ಮೆ. ವಾ. ವಿದ್ಯುತ್ ಉತ್ಪಾದಿಸಲು ಮಾಡಿಕೊಂಡ ಒಡಂಬಡಿಕೆಯನ್ನು ರದ್ದುಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು, ಈ ಯೋಜನೆಯ ಪೂರ್ತಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.2007ರಲ್ಲಿ ತಮಿಳುನಾಡು ವಿದ್ಯುತ್ ಮಂಡಲಿಯ ಜತೆ ಬಿಎಚ್‌ಇಎಲ್ ಎಂಟು ಸಾವಿರ ಕೋಟಿ ರೂಪಾಯಿ ವೆಚ್ಚದ ವಿದ್ಯುತ್ ಉತ್ಪಾದನಾ ಯೋಜನೆಗೆ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ ಯೋಜನೆಯಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ. ಆದ್ದರಿಂದ ಒಡಂಬಡಿಕೆಯನ್ನು ರದ್ದುಪಡಿಸಲಾಗಿದೆ ಎಂದು ಜಯಲಲಿತಾ ತಿಳಿಸಿದ್ದಾರೆ.ಉಡಂಗುಡಿಯಲ್ಲಿ ಆರಂಭಿಸಲು ಉದ್ದೇಶಿಸಿದ್ದ ವಿದ್ಯುತ್ ಯೋಜನೆಗೆ ಬಿಎಚ್‌ಇಎಲ್ ಮತ್ತು ತಮಿಳುನಾಡು ವಿದ್ಯುತ್ ಮಂಡಳಿ ತಲಾ ಶೇಕಡಾ 26ರಷ್ಟು ಪಾಲು ಬಂಡವಾಳ ಹೂಡುವುದು ಮತ್ತು ಉಳಿದ ಶೇಕಡಾ 48ರಷ್ಟು ಪಾಲು ಬಂಡವಾಳವನ್ನು ಆಸಕ್ತ ಖಾಸಗಿ ಹೂಡಿಕೆದಾರರಿಂದ ಭರಿಸುವುದು ಎಂದು ನಿರ್ಧರಿಸಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry